alex Certify
ಕನ್ನಡ ದುನಿಯಾ       Mobile App
       

Kannada Duniya

ಹೈ ಓಲ್ಟೇಜ್ ಪಂದ್ಯಕ್ಕೂ ಮುನ್ನವೇ ಟ್ವೀಟರ್ ನಿಂದ ದೂರವಾದ್ರು ಸಾನಿಯಾ

ಭಾರತ-ಪಾಕಿಸ್ತಾನದ ಮಧ್ಯೆ ಏಷ್ಯಾ ಕಪ್ ಹೈ ಓಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಗೆಲುವು ಯಾರಿಗೆ ಎಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈ ಮಧ್ಯೆ ಭಾರತದ ಟೆನಿಸ್ ಆಟಗಾರ್ತಿ ಹಾಗೂ ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಟ್ವೀಟರ್ ನಿಂದ ದೂರವಿರಲು ನಿರ್ಧರಿಸಿದ್ದಾರೆ.

ಸಾನಿಯಾ ಮಿರ್ಜಾ, ಪಂದ್ಯಕ್ಕೆ 24 ಗಂಟೆಯಿರುವ ಮೊದಲೇ ಒಂದು ಟ್ವಿಟ್ ಮಾಡಿದ್ದಾರೆ. ಪಂದ್ಯಕ್ಕೆ ಇನ್ನು 24 ಗಂಟೆಯಿದೆ. ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ನಾನು ದೂರವಿರುವುದು ವಾಸಿ. ಪಂದ್ಯದ ವೇಳೆ ಹಾಗೂ ನಂತ್ರ ಟ್ರೋಲರ್ ಗಳ ಮಾತು ಸಾಮಾನ್ಯ ವ್ಯಕ್ತಿಯ ಮನಸನ್ನೇ ನೋಯಿಸುತ್ತೆ. ಇನ್ನು ಗರ್ಭಿಣಿ ವಿಚಾರವನ್ನು ಪ್ರೇತ್ಯೇಕವಾಗಿ ಹೇಳಬೇಕಾಗಿಲ್ಲ. ಪಂದ್ಯ ಕುತೂಹಲಕಾರಿಯಾಗಿರಲಿ. ನೆನಪಿರ್ಲಿ ಇದು ಕೇವಲ ಕ್ರಿಕೆಟ್ ಪಂದ್ಯವಷ್ಟೆ ಎಂದು ಟ್ವಿಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಭಾರತ-ಪಾಕ್ ಮಧ್ಯೆ ಕ್ರಿಕೆಟ್ ಪಂದ್ಯ ಶುರುವಾದ್ರೆ ಎಲ್ಲರ ಗಮನ ಸೆಳೆಯೋದು ಸಾನಿಯಾ ಮಿರ್ಜಾ. ಸಾನಿಯಾ ಯಾರಿಗೆ ಬೆಂಬಲ ನೀಡ್ತಾರೆ? ಭಾರತ ಸೋತ್ರೆ ಅವ್ರ ಪ್ರತಿಕ್ರಿಯೆಯೇನು ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...