alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಅಭಿಮಾನಿಯೊಂದಿಗೆ ಅನುಚಿತ ವರ್ತನೆ

basherr pak k

ಪಾಕಿಸ್ತಾನ ತಂಡದ ಕ್ರಿಕೆಟ್ ಪಂದ್ಯ ಎಲ್ಲಿ ನಡೆದರೂ ಅಲ್ಲಿ ಅಭಿಮಾನಿ ಮಹಮ್ಮದ್ ಬಶೀರ್ ಹಾಜರಿರುತ್ತಾರೆ. ಪಾಕ್ ಧ್ವಜ ಕೈಯಲ್ಲಿಡಿದು ಅದೇ ಬಣ್ಣದ ಬಟ್ಟೆ ತೊಟ್ಟು ತಮ್ಮ ತಂಡವನ್ನು ಪ್ರೋತ್ಸಾಹಿಸುತ್ತಾರೆ. ಬಶೀರ್ ಗೆ ಟೀಂ ಇಂಡಿಯಾ ನಾಯಕ ಧೋನಿ ಸಖತ್ ಇಷ್ಟವಂತೆ.

ಬಷೀರ್ ಅವರಿಗಾಗಿಯೇ ಧೋನಿ ಹಲವು ಬಾರಿ ಪಂದ್ಯದ ಟಿಕೆಟ್ ಗಳನ್ನು ಕೊಡಿಸಿದ್ದಾರೆ. ಹೀಗೆ ಭಾರತ ತಂಡದವರೂ ಕೂಡ ಪಾಕಿಸ್ತಾನ ತಂಡದ ಅಭಿಮಾನಿ ಬಶೀರ್ ಅವರನ್ನು ಗೌರವಿಸುತ್ತಾರೆ. ಆದರೆ, ಬಾಂಗ್ಲಾದಲ್ಲಿ ಏನಾಗಿದೆ ನೋಡಿ. ಮೀರ್ ಪುರದಲ್ಲಿ ನಡೆದ ಬಾಂಗ್ಲಾ ಮತ್ತು ಪಾಕ್ ನಡುವಿನ ಏಷ್ಯಾಕಪ್ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಮೈದಾನದಲ್ಲಿದ್ದ ಮಹಮ್ಮದ್ ಬಶೀರ್ ತಮ್ಮ ತಂಡಕ್ಕೆ ಪ್ರೋತ್ಸಾಹ ನೀಡುವುದನ್ನು ಅಲ್ಲಿದ್ದ ಬಾಂಗ್ಲಾ ಅಭಿಮಾನಿಗಳು ಗಮನಿಸಿದ್ದಾರೆ.

ಪಾಕ್ ಸೋಲುತ್ತಿದ್ದಂತೆ ಬಶೀರ್ ಬಳಿ ಬಂದ ಬಾಂಗ್ಲಾ ಅಭಿಮಾನಿಗಳು, ಬಲವಂತವಾಗಿ ಪಾಕ್ ಧ್ವಜದ ಕಲರ್ ಇದ್ದ ಬಟ್ಟೆಯನ್ನು ತೆಗೆಸಿ, ಬಾಂಗ್ಲಾ ಬಾವುಟದ ಬಣ್ಣದ ಹೊದಿಕೆ ಹಾಕಿಸಿದ್ದಾರೆ. ಕಿಡಿಗೇಡಿಗಳು ಆ ಹಿರಿಯ ಜೀವಕ್ಕೆ ಕಣ್ಣೀರು ಹಾಕಿಸಿ, ಅವಮಾನ ಮಾಡಿದ್ದಾರೆ. ಹೀಗೆ ಬಶೀರ್ ಅವರಿಗೆ ಅವಮಾನ ಮಾಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...