alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್ ಹಾಕಿಯಲ್ಲಿ ಮುಖಾಮುಖಿಯಾಗ್ತಿವೆ ಭಾರತ-ಪಾಕ್

ಬಾಂಗ್ಲಾದೇಶದ ಢಾಕಾದಲ್ಲಿ ಅಕ್ಟೋಬರ್ 11 ರಿಂದ 22ರವರೆಗೆ ಏಷ್ಯಾ ಕಪ್ ಹಾಕಿ ಸರಣಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗ್ರೂಪ್ ನಲ್ಲಿದ್ದು, ಪರಸ್ಪರ ಮುಖಾಮುಖಿಯಾಗಲಿವೆ. ಈ ಸರಣಿಯಲ್ಲಿ ಗೆದ್ದ ತಂಡ ಓಡಿಶಾದಲ್ಲಿ 2018ರಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಗೆ ನೇರ ಪ್ರವೇಶ ಪಡೆಯಲಿದೆ.

8 ರಾಷ್ಟ್ರಗಳು ಏಷ್ಯಾ ಕಪ್ ನಲ್ಲಿ ಭಾಗವಹಿಸುತ್ತಿವೆ. ಗ್ರೂಪ್ ‘ಎ’ ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಜಪಾನ್ ತಂಡಗಳಿವೆ. ಭಾರತ ಸರಣಿಯಲ್ಲಿ ಅಗ್ರಸ್ಥಾನ ಪಡೆದಿರುವ ತಂಡ ಎನಿಸಿಕೊಂಡಿದೆ. 2013ರಲ್ಲಿ ದಕ್ಷಿಣ ಕೊರಿಯಾ ಚಾಂಪಿಯನ್ಷಿಪ್ ಗೆದ್ದುಕೊಂಡಿತ್ತು.

ಗ್ರೂಪ್ ‘ಬಿ’ನಲ್ಲಿ ದಕ್ಷಿಣ ಕೊರಿಯಾ, ಮಲೇಷಿಯಾ, ಚೀನಾ ಮತ್ತು ಓಮನ್ ತಂಡಗಳಿವೆ. ಅಕ್ಟೋಬರ್ 15ರಂದು ಭಾರತ-ಪಾಕಿಸ್ತಾನ ನಡುವಣ ಪಂದ್ಯ ನಡೆಯಲಿದೆ. ಅಕ್ಟೋಬರ್ 11ರಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಎದುರಾಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...