alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ದಾಖಲೆ ನಿರೀಕ್ಷೆಯಲ್ಲಿ ಧೋನಿ

ಏಷ್ಯಾ  ಕಪ್ ಕ್ರಿಕೆಟ್ ಟೂರ್ನಿ ಹತ್ತಿರ ಬರ್ತಿದೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐದನೇ ಬಾರಿ ಏಷ್ಯಾ ಕಪ್ ಆಡಲಿದ್ದಾರೆ. 2008 ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಬಾರಿ ಏಷ್ಯಾ ಕಪ್ ಗೆ ಸೆಣೆಸಾಡಿದ್ದ ಧೋನಿ, 2010, 2012, 2016ರಲ್ಲಿ ಏಷ್ಯಾ ಕಪ್ ಆಡಿದ್ದರು. ಗಾಯದ ಕಾರಣ 2014ರಲ್ಲಿ ನಡೆದ ಪಂದ್ಯಾವಳಿಯಿಂದ ಅವ್ರು ಹೊರಗಿದ್ದರು.

ಆಟಗಾರರಾಗಿ ಇದೇ ಮೊದಲ ಬಾರಿ ಧೋನಿ ಏಷ್ಯಾ ಕಪ್ ಆಡಲಿದ್ದಾರೆ. ಈ ಹಿಂದೆ ಅವ್ರ ನೇತೃತ್ವದಲ್ಲಿ 2012, 2016 ರಲ್ಲಿ ಕಪ್ ಭಾರತದ ಪಾಲಾದ್ರೆ 2008 ರಲ್ಲಿ ರನ್ನರ್ ಅಪ್ ಆಗಿತ್ತು. ಧೋನಿಗೆ ವಯಸ್ಸಾಗಿದ್ದು ನಿಜ. ಆದ್ರೆ ಬ್ಯಾಟಿಂಗ್ ಹಾಗೂ ಕೀಪಿಂಗ್ ನಲ್ಲಿ ಅದು ಕಾಣ್ತಿಲ್ಲ.

ಧೋನಿ ಈವರೆಗೆ ಆಡಿದ ಏಷ್ಯಾ ಕಪ್ ನಲ್ಲಿ ಒಟ್ಟು 24 ವಿಕೆಟ್ ಪಡೆದಿದ್ದಾರೆ. 19 ಕ್ಯಾಚ್ ಆದ್ರೆ 5 ಸ್ಟಂಪಿಂಗ್ ಮಾಡಿದ್ದಾರೆ. ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವ್ರು ಶ್ರೀಲಂಕಾದ ಕುಮಾರ ಸಂಗಕ್ಕಾರ. ಅವ್ರು ಐದು ಏಷ್ಯಾ ಕಪ್ ಆಡಿದ್ದು, 36 ವಿಕೆಟ್ ಪಡೆದಿದ್ದಾರೆ. ಅದ್ರಲ್ಲಿ 27 ಕ್ಯಾಚ್ ಆದ್ರೆ 9 ಸ್ಟಂಪಿಂಗ್. ಧೋನಿ ತಮ್ಮ ಐದನೇ ಏಷ್ಯಾ ಕಪ್ ನಲ್ಲಿ 6 ಪಂದ್ಯಗಳಲ್ಲಿ 12 ವಿಕೆಟ್ ತೆಗೆದ್ರೆ ಸಂಗಕ್ಕಾರ ದಾಖಲೆ ಮುರಿಯಲಿದ್ದಾರೆ.

ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೂ ಇದೆ. ಧೋನಿ ಈವರೆಗೆ 571 ರನ್ ಗಳಿಸಿದ್ದಾರೆ. ಈ ಬಾರಿ 103 ರನ್ ಕಲೆ ಹಾಕಿದ್ರೆ ಧೋನಿ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಧೋನಿ ಪ್ರಸ್ತುತ 321 ಏಕದಿನ ಪಂದ್ಯಗಳನ್ನಾಡಿದ್ದು 51.25 ಓವರ್ ಗಳಲ್ಲಿ 10046 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಧೋನಿ 12ನೇ ಸ್ಥಾನದಲ್ಲಿದ್ದಾರೆ. 11ನೇ ಸ್ಥಾನದಲ್ಲಿ ತಿಲಕರತ್ನೆ ಹೆಸರಿದೆ. ಧೋನಿ ಈ ಬಾರಿ ಏಷ್ಯಾ ಕಪ್ ನಲ್ಲಿ 244 ರನ್ ಗಳಿಸಿದ್ರೆ 11ನೇ ಸ್ಥಾನಕ್ಕೇರಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...