alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೂಪರ್ ಫ್ಯಾನ್ಸ್’ ಜೊತೆ ಸಮಯ ಕಳೆದ ರೋಹಿತ್, ಧೋನಿ

ಸ್ಟಾರ್ ಕ್ರಿಕೆಟಿಗರ ಜೀವನದ ಪ್ರತಿ ಹೆಜ್ಜೆಯನ್ನೂ ವಿಶ್ಲೇಷಿಸುವ ಸಾಮಾಜಿಕ ಜಾಲತಾಣದ ಕಾಲದಲ್ಲಿ‌ ನಿಜವಾದ ಫ್ಯಾನ್ ಗಳನ್ನು ಹುಡುಕುವುದೇ ಕಷ್ಟ. ಆದರೆ ಮೈದಾನದಲ್ಲಿ ಯಾವುದೇ ಫಲಿತಾಂಶ ಬರಲಿ ತಮ್ಮ ಸ್ಟಾರ್ ಆಟಗಾರರನ್ನು ಎಡೆಬಿಡದೆ ಬೆಂಬಲಿಸುವ ಫ್ಯಾನ್ ಗಳು ಇನ್ನೂ ಇದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ಶುಕ್ರವಾರ ಏಷ್ಯಾ ಕಪ್ ಫೈನಲ್ ನಲ್ಲಿ ಮುಖಾಮುಖಿಯಾದಾಗ ಎರಡೂ ಕಡೆಯ ಫ್ಯಾನ್ ಗಳಿಗೆ ತಮ್ಮ ಸ್ಟಾರ್ ಗಳನ್ನು ಉತ್ತೇಜಿಸುವ ‌ಸಮಯ ಬರಲಿದೆ.

ಖಂಡದಲ್ಲಿ‌ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳಲು ಹವಣಿಸುತ್ತಿರುವ ವಿಶ್ವದ ಎರಡನೇ ಶ್ರೇಯಾಂಕಿತ ಭಾರತ ತಂಡವನ್ನು, ಗಾಯಗಳಿಂದ ಜರ್ಜರಿತವಾಗಿರುವ ಬಾಂಗ್ಲಾದೇಶ ಎದುರಿಸಲಿದೆ. ಎರಡನೇ ಬಾರಿಗೆ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ರೋಹಿತ್ ಶರ್ಮ ನಾಯಕತ್ವದ ಮೆನ್ ಇನ್ ಬ್ಲೂ ತಂಡ ಮೈದಾನಕ್ಕಿಳಿದರೆ, ಮೂರನೆ ಬಾರಿಗೆ ಏಷ್ಯಾ ಕಪ್ ಫೈನಲ್ ನಲ್ಲಿ‌ ಸೆಣೆಸುತ್ತಿರುವ ಬಾಂಗ್ಲಾದೇಶಿಗರಿಗೆ ಹಿಂದಿನ ಕಪ್ ಸೋತ ಕಹಿ ಅಳಿಸಿಕೊಳ್ಳುವ ಸಮಯ.

ಅಂತಿಮ‌ ಹಣಾಹಣಿ ಸಿದ್ಧತೆ ನಡುವೆಯೇ ಎರಡು ದಿನದ ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ ಹಾಗೂ ಎಂ.ಎಸ್.‌ ಧೋನಿ ತಮ್ಮ ಸೂಪರ್ ಫ್ಯಾನ್ ಗಳನ್ನು ಭೇಟಿ ಮಾಡಿದ್ದಾರೆ. ಭಾರತದ ಸುಧೀರ್ ಗೌತಮ್, ಪಾಕಿಸ್ತಾನದ ಬಷೀರ್ ಚಾಚಾ ಅಲಿಯಾಸ್ ಚಾಚಾ ಚಿಕಾಗೊ ಹಾಗೂ ಶ್ರೀಲಂಕಾದ ಮೊಹಮ್ಮದ್ ನಿಲಂ, ಗಾಯನ್ ಸೇನಾನಾಯಕೆ ಅವರನ್ನು‌ ಭೇಟಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಉಳಿದುಕೊಂಡಿರುವ ಹೋಟೆಲ್ ನಲ್ಲೆ‌ ರೂಂ ನಲ್ಲಿರುವ ಚಾಚಾ ಚಿಕಾಗೊ ಹಾಗೂ ಸುಧೀರ್ ರನ್ನು ಸ್ಟಾರ್ ಕ್ರಿಕೆಟಿಗರು ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿದ್ದಾರೆ. ಒಂದೇ ಫೋಟೊದಲ್ಲಿ‌ ಕ್ರಿಕೆಟ್ ಬಗ್ಗೆ ಅದೆಷ್ಟು ಪ್ರೀತಿ ಕಾಣಿಸುತ್ತದೆ ಎಂದು ರೋಹಿತ್ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಸೂಪರ್ ಫ್ಯಾನ್ ಗಳೂ ತಂತಮ್ಮ ಖಾತೆಯಲ್ಲಿ ಫೋಟೊಗಳನ್ನು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...