alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್:ಭಾರತ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದ್ರೆ ದಂಗಾಗ್ತಿರಾ

ಭಾರತ-ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯ ನಡೆದಾಗ ಮೈದಾನ ತುಂಬಿ ತುಳುಕೋದ್ರಲ್ಲಿ ಸಂಶಯವಿಲ್ಲ. ಏಷ್ಯಾ ಕಪ್ ನಲ್ಲಿ ಕೂಡ ಭಾರತ-ಪಾಕಿಸ್ತಾನ ಸೆಣೆಸಲಿದೆ. ಸೆಪ್ಟೆಂಬರ್ 19ರಂದು ಅಂದ್ರೆ ಬುಧವಾರ ಭಾರತ-ಪಾಕ್ ಕ್ರಿಕೆಟ್ ತಂಡ ಮುಖಾಮುಖಿಯಾಗಲಿದೆ. ಮಂಗಳವಾರ ಹಾಂಗ್ ಕಾಂಗ್ ಜೊತೆ ಆಡ್ತಾ ಇದೆ. ಭಾರತ, ಪಾಕ್ ವಿರುದ್ಧ ಗೆಲುವು ಸಾಧಿಸಿದ್ರೆ ನೇರವಾಗಿ ಸೂಪರ್ -4 ಸ್ಥಾನದಲ್ಲಿ ಜಾಗ ಪಡೆಯಲಿದೆ.

ಬುಧವಾರದ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ದುಬೈನಲ್ಲಿ ಭಾರತ-ಪಾಕ್ ಪಂದ್ಯದ ಟಿಕೆಟ್ ಗೆ ಫುಲ್ ಬೇಡಿಕೆಯಿದೆ. ಟಿಕೆಟ್ ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆ ಕೂಡ ಗಗನಕ್ಕೇರಿದೆ. ಸಾಮಾನ್ಯ ಬೆಲೆಗಿಂತ ಎರಡು-ಮೂರು ಪಟ್ಟು ಬೆಲೆ ಹೆಚ್ಚಾಗಿದೆಯಂತೆ.

150 ದಿರ್ಹಾಮ್ ಟಿಕೆಟ್ ಈಗ 300ರಿಂದ 450 ದಿರ್ಹಾಮ್ ಗೆ ಮಾರಾಟವಾಗ್ತಿದೆ. ಅಂದ್ರೆ 2 ಸಾವಿರ ರೂಪಾಯಿ ಮೌಲ್ಯದ ಟಿಕೆಟ್ 6 ಸಾವಿರದವರೆಗೆ ಮಾರಾಟವಾಗ್ತಿದೆ. ನಾಲ್ಕಕ್ಕಿಂತ ಹೆಚ್ಚು ಟಿಕೆಟ್ ಖರೀದಿ ಮಾಡುವವರಿಗೆ 100 ದಿರ್ಹಾಮ್ ರಿಯಾಯಿತಿ ಕೂಡ ನೀಡಲಾಗ್ತಿದೆ. 650 ದಿರ್ಹಾಮ್ ಟಿಕೆಟ್ 1000 ದಿರ್ಹಾಮ್ ಗೆ ಮಾರಾಟವಾಗ್ತಿದೆ.

ಕೆಲವರು ಆನ್ಲೈನ್ ನಲ್ಲಿ ಟಿಕೆಟ್ ಖರೀದಿ ಮಾಡಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ-ಪಾಕ್ ಎದುರಾಗಬೇಕೆಂಬುದು ಅಭಿಮಾನಿಗಳ ಬಯಕೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...