alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್ ನಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ನಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವ್ರು ಮುಂದಿನ ಪಂದ್ಯಗಳಲ್ಲಿ ಆಡುವುದಿಲ್ಲ. ಪಾಂಡ್ಯಾ ಬದಲು ದೀಪಕ್ ಚಾಹಲ್ ಗೆ ತಂಡದಲ್ಲಿ ಜಾಗ ಸಿಗುವ ಸಾಧ್ಯತೆ ಹೆಚ್ಚಿದೆ. ಗುರುವಾರ ಚಾಹಲ್ ಯುಎಇಗೆ ತೆರಳಿದ್ದಾರೆಂದು ಬಿಸಿಸಿಐ ಮೂಲಗಳು ಹೇಳಿವೆ.

ಬುಧವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಂಭೀರವಾಗಿ ಗಾಯಗೊಂಡಿದ್ದರು. ಬೌಲಿಂಗ್ ಮಾಡ್ತಿದ್ದ ಪಾಂಡ್ಯ ಕುಸಿದು ಬಿದ್ದಿದ್ದರು. ವೈದ್ಯರ ತಂಡ ಕೂಡಲೇ ಅವ್ರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಕರೆದೊಯ್ದಿತ್ತು.

ಪಾಂಡ್ಯ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಪಾತ್ರ ಮುಖ್ಯವಾಗಿತ್ತು. ಬುಧವಾರ ಹಾರ್ದಿಕ್ ಪಾಂಡ್ಯ ಮೈದಾನದಿಂದ ಹೊರಗೆ ಹೋಗ್ತಿದ್ದಂತೆ ಮನೀಶ್ ಫೀಲ್ಡಿಂಗ್ ಮಾಡಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...