alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್: ಕೊಹ್ಲಿಗೆ ವಿಶ್ರಾಂತಿ, ರೋಹಿತ್ ಶರ್ಮಾಗೆ ಪಟ್ಟ

ದುಬೈನಲ್ಲಿ ನಡೆಯಿರುವ ಏಷ್ಯಾ ಕಪ್ ಗೆ ಭಾರತ ತಂಡ ಪ್ರಕಟಿಸಲಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದ್ರೆ, ಖಲೀಲ್ ಅಹ್ಮದ್ ಗೆ ಬ್ಲ್ಯೂ ಜೆರ್ಸಿ ತೊಡುವ ಭಾಗ್ಯ ಲಭಿಸಿದೆ.

ಭಾರತ ಎ ಹಾಗೂ ದೇಶಿಯ ಟೂರ್ನಿಯಲ್ಲಿ ರನ್ ಮಳೆಯನ್ನು ಹರಿಸಿದ ಕನ್ನಡಿಗ ಮಯಾಂಕ್ ಅಗರ್ ವಾಲ್ ಗೆ ಈ ಬಾರಿಯೂ ಸ್ಥಾನ ಲಭಿಸಿಲ್ಲ. ಮನೀಷ್ ಪಾಂಡೆ, ರನ್ ಕಲೆ ಹಾಕಿ ಆಯ್ಕೆದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಎಲ್. ರಾಹುಲ್ ಸ್ಥಾನ ಉಳಿಸಿಕೊಂಡಿದ್ದಾರೆ.

ಐಪಿಎಲ್ ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಅಂಬಟಿ ರಾಯುಡುಗೆ ಬುಲಾವ್ ನೀಡಲಾಗಿದೆ. ಚೆನ್ನೈ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಅಂಬಟಿ ರನ್ ಕಲೆ ಹಾಕಿ ಅಬ್ಬರಿಸಿದ್ದರು. ಅಲ್ಲದೆ ಯೋ-ಯೋ ಟೆಸ್ಟ್ ನಲ್ಲೂ ಪಾಸ್ ಆಗಿದ್ದಾರೆ.

ಉಳಿದಂತೆ 19 ವರ್ಷದೊಳಗಿನ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಖಲೀಲ್ ಅಹ್ಮದ್ ಗೂ ಭಾರತ ಹಿರಿಯರ ತಂಡದಲ್ಲಿ ಸ್ಥಾನ ನೀಡಲಾಗಿದೆ.

ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಕೇದಾರ್ ಜಾದವ್, ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬೂಮ್ರಾ, ಶಾರ್ದುಲ್ ಠಾಕೂರ್, ಖಲೀಲ್ ಅಹ್ಮದ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...