alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನ ಮತ್ತೊಂದು ಮನೆ ಯುಎಇ: 26 ಪಂದ್ಯಗಳಲ್ಲಿ 19 ಪಂದ್ಯ ಗೆದ್ದಿದೆ ಪಾಕ್

ಶತ್ರು ರಾಷ್ಟ್ರಗಳ ಮಧ್ಯೆ ಕ್ರಿಕೆಟ್ ಯುದ್ಧ ನಡೆಯಲಿದೆ. ಭಾರತ-ಪಾಕಿಸ್ತಾನ ಮಧ್ಯೆ ನಡೆಯುವ ಏಷ್ಯಾ ಕಪ್ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯ್ತಿದ್ದಾರೆ. ಇಂದೊಂದೇ ಅಲ್ಲ ಫೈನಲ್ ನಲ್ಲಿ ಕೂಡ ಭಾರತ-ಪಾಕ್ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

ಭಾರತ-ಪಾಕಿಸ್ತಾನ ಈವರೆಗೆ 129 ಬಾರಿ ಏಕದಿನ ಪಂದ್ಯವನ್ನಾಡಿದೆ. ಪಾಕಿಸ್ತಾನದ ವಿರುದ್ಧ ಭಾರತ 52 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಗೆಲುವಿನ ದರ ಶೇಕಡಾ 41.60 ರಷ್ಟಿದೆ. ಪಾಕಿಸ್ತಾನ ಭಾರತದ ವಿರುದ್ಧ 73 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 4 ಪಂದ್ಯಗಳಲ್ಲಿ ಯಾವುದೇ ಫಲಿತಾಂಶವಿಲ್ಲ.

ಏಷ್ಯಾ ಕಪ್ ವಿಚಾರಕ್ಕೆ ಬರೋದಾದ್ರೆ 11 ಬಾರಿ ಎರಡೂ ದೇಶಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳು 5-5 ಬಾರಿ ಗೆಲುವು ಸಾಧಿಸಿವೆ. 1997ರಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ 6 ಬಾರಿ ಚಾಂಪಿಯನ್ ಆದ್ರೆ ಪಾಕಿಸ್ತಾನ 2 ಬಾರಿ ಕಪ್ ಹಿಡಿದಿದೆ.

ಭಾರತ-ಪಾಕಿಸ್ತಾನದ ಮಧ್ಯೆ ಯುಎಇಯಲ್ಲಿ ಈವರೆಗೆ 26 ಪಂದ್ಯಗಳು ನಡೆದಿವೆ. ಪಾಕಿಸ್ತಾನ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಭಾರತ 7 ಪಂದ್ಯಗಳಲ್ಲಿ ಗೆಲುವು ಕಂಡಿದೆ. 14 ತಿಂಗಳುಗಳ ನಂತ್ರ ಮತ್ತೆ ವೈರಿಗಳ ಮುಖಾಮುಖಿಯಾಗ್ತಿದ್ದು, ಇಂದಿನ ಪಂದ್ಯ ಯಾರ ಕೈಸೇರಲಿದೆ ಎಂಬುದನ್ನು ನೋಡಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...