alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತರಾಷ್ಟ್ರೀಯ ಕ್ರಿಕೆಟ್ ಗೆ ನೆಹ್ರಾ ವಿದಾಯ

ಟೀಂ ಇಂಡಿಯಾದ ಹಿರಿಯ ಆಟಗಾರ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ನವೆಂಬರ್ 1ರಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆಯುವ ಮೊದಲ ಟಿ-20 ಪಂದ್ಯದ ನಂತ್ರ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ.

ನೆಹ್ರಾ ನವೆಂಬರ್ 1ರಂದು ನಿವೃತ್ತಿ ಘೋಷಣೆ ಮಾಡಲಿದ್ದಾರೆಂದು ಪಿಟಿಐ ನಿನ್ನೆ ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಮಾಹಿತಿ ನೀಡಿದೆ. ಈ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ.ಇದು ನೆಹ್ರಾ ವಿದಾಯದ ಪಂದ್ಯವಾಗಲಿದ್ದು, ತಮ್ಮ ತವರು ನೆಲದಲ್ಲಿ ನೆಹ್ರಾ ಕೊನೆ ಪಂದ್ಯವನ್ನಾಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ-20 ಪಂದ್ಯದ ಟೀಂನಲ್ಲಿ ನೆಹ್ರಾ ಸ್ಥಾನ ಪಡೆದಿದ್ದರು. ಇದು ತಜ್ಞರಲ್ಲಿ ಪ್ರಶ್ನೆ ಹುಟ್ಟುಹಾಕಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ನೆಹ್ರಾ,ವನಾನು ಫಿಟ್ ಆಗಿದ್ದೇನೆ. ಭಾರತಕ್ಕಾಗಿ ಇನ್ನೂ 2 ವರ್ಷ ಆಡಬಲ್ಲೆ ಎಂದಿದ್ದರು.

ನೆಹ್ರಾ ಈ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 2018ರಲ್ಲಿ ನಡೆಯುವ ಟಿ-20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿರುವ ನೆಹ್ರಾ ಜೂನಿಯರ್ ಆಟಗಾರರಿಗೆ ಅವಕಾಶ ಸಿಗುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...