alex Certify
ಕನ್ನಡ ದುನಿಯಾ       Mobile App
       

Kannada Duniya

”ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಗೆ ಕೊಹ್ಲಿ-ಧೋನಿ ಅವಶ್ಯಕತೆಯಿದೆ”

ನ್ಯೂಜಿಲ್ಯಾಂಡ್ ವಿರುದ್ಧ ತಮ್ಮ ತವರಿನಲ್ಲಿ ಕೊನೆಯ ಟಿ-20 ಪಂದ್ಯವನ್ನಾಡಿದ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ವಿದಾಯದ ನಂತ್ರ ಮಾಧ್ಯಮವೊಂದರ ಜೊತೆ ಮಾತನಾಡಿದ ನೆಹ್ರಾ ಸಾಕಷ್ಟು ವಿಷ್ಯಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

ಸಂದರ್ಶನದ ವೇಳೆ ನೆಹ್ರಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿಯನ್ನು ಹಾಡಿ ಹೊಗಳಿದ್ದಾರೆ. ಡ್ರೆಸ್ಸಿಂಗ್ ರೂಮಿಗೆ ಇವರಿಬ್ಬರ ಅವಶ್ಯಕತೆಯಿದೆ ಎಂದು ನೆಹ್ರಾ ಹೇಳಿದ್ದಾರೆ. ಭಾರತ ತಂಡ ಭಾಗ್ಯಶಾಲಿ. ಯಾಕೆಂದ್ರೆ ಟೀಂ ಇಂಡಿಯಾ ಬಳಿ ಕೊಹ್ಲಿ, ಧೋನಿಯಂತಹ ಆಟಗಾರರಿದ್ದಾರೆಂದು ನೆಹ್ರಾ ಹೇಳಿದ್ದಾರೆ.

ಡ್ರೆಸ್ಸಿಂಗ್ ರೂಮಿಗೆ ಧೋನಿ ಅವಶ್ಯಕತೆಯಿದೆ. ಧೋನಿ ಅನುಭವ ಯುವ ಆಟಗಾರರಿಗೆ ಮಾದರಿ ಹಾಗೂ ಪ್ರೇರಣೆಯಾಗ್ತಿದೆ ಎಂದು ನೆಹ್ರಾ ಹೇಳಿದ್ದಾರೆ. ಕೊಹ್ಲಿ ಆಟವನ್ನು ಮೆಚ್ಚಿದ ನೆಹ್ರಾ, ವಿರಾಟ್ ಎರಡು ಪಂದ್ಯದಲ್ಲಿ ಶತಕ ಬಾರಿಸಿ ಮೂರನೇ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವವರಲ್ಲ. ಮೂರನೇ ಪಂದ್ಯದಲ್ಲಿಯೂ ಶತಕ ಬಾರಿಸುವ ಶಕ್ತಿ ಅವರಿಗಿದೆ ಎಂದಿದ್ದಾರೆ. ಎಲ್ಲ ಪಂದ್ಯದಲ್ಲಿಯೂ ಒಂದೇ ರೀತಿ ಆಟ ಪ್ರದರ್ಶಿಸಲು ಸಾಧ್ಯವಿಲ್ಲ. ಆದ್ರೆ ಕೊಹ್ಲಿ ಚಿಂತನೆ ಮೆಚ್ಚುವಂತಹದ್ದು ಎಂದು ನೆಹ್ರಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...