alex Certify
ಕನ್ನಡ ದುನಿಯಾ       Mobile App
       

Kannada Duniya

ನ.1ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನೆಹ್ರಾ ವಿದಾಯ

ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಮಣಿಸಿರುವ ಟೀಂ ಇಂಡಿಯಾ ಟಿ-20 ಸರಣಿಯನ್ನೂ ತನ್ನದಾಗಿಸಿಕೊಳ್ಳುವ ತಯಾರಿಯಲ್ಲಿದೆ. ನವೆಂಬರ್ 1ರಿಂದ ಭಾರತ- ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟಿ-20 ಸರಣಿ ಶುರುವಾಗಲಿದೆ.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯದ ಮೂಲಕ ಭಾರತದ ವೇಗಿ ಆಶಿಶ್ ನೆಹ್ರಾ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಲಿದ್ದಾರೆ. ನೆಹ್ರಾ ತಮ್ಮ 19 ವರ್ಷಗಳ ವೃತ್ತಿ ಜೀವನಕ್ಕೆ ತವರು ಮೈದಾನದಲ್ಲಿ ವಿದಾಯ ಹೇಳಲಿದ್ದಾರೆ.

38 ವರ್ಷದ ನೆಹ್ರಾ 1999ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಮೊದಲ ಪಂದ್ಯವನ್ನಾಡಿದ್ದರು. ಅಲ್ಲಿಂದ ಹಿಡಿದು ಕೊಹ್ಲಿ ನಾಯಕತ್ವದವರೆಗೂ ನೆಹ್ರಾ ಆಟವಾಡಿದ್ದಾರೆ. ಧೋನಿ, ದ್ರಾವಿಡ್, ಗಂಗೂಲಿ, ಗಂಭೀರ್, ಸೆಹ್ವಾಗ್ ನಾಯಕತ್ವದಲ್ಲಿಯೂ ನೆಹ್ರಾ ಮೈದಾನಕ್ಕಿಳಿದಿದ್ದಾರೆ. ಸದ್ಯ ಟೀಂ ಇಂಡಿಯಾ ಆಟಗಾರರಲ್ಲಿ ಅತ್ಯಂತ ಹಳೆಯ ಹಾಗೂ ಅನುಭವಿ ಆಟಗಾರ ನೆಹ್ರಾ. ನಾಯಕ ಕೊಹ್ಲಿಗಿಂತ 10 ವರ್ಷ ದೊಡ್ಡವರು.

ಅಭಿಮಾನಿಗಳು ಹಾಗೂ ಕುಟುಂಬಸ್ಥರ ಮುಂದೆ ತವರಿನಲ್ಲಿ ನೆಹ್ರಾ ತಮ್ಮ ವೃತ್ತಿಗೆ ವಿದಾಯ ಹೇಳಲಿದ್ದಾರೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿ ಭಾರತ, ನೆಹ್ರಾಗೆ ಗೆಲುವಿನ ವಿದಾಯ ಹೇಳಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...