alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಭಾರತದ ಅರುಣಾಗೆ ಕಂಚು

ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನಡೆದ ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಭಾರತದ ಅರುಣಾ ಬುದ್ಧ ರೆಡ್ಡಿ ಕಂಚಿನ ಪದಕ ಗೆದ್ದಿದ್ದಾರೆ. ಆದ್ರೆ ಭಾರತದ ಪ್ರಣತಿ ನಾಯಕ್ ಪದಕ ವಂಚಿತರಾದ್ರು. ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ್ರು.

13.649 ಸ್ಕೋರ್ ನೊಂದಿಗೆ ಅರುಣಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ರು. 13.8 ಅಂಕ ಸಂಪಾದಿಸಿದ ಸ್ಲೊವೇನಿಯಾದ ಟಿಜಾಸಾ ಕಿಸ್ಲೆಫ್ ಚಿನ್ನ ಗೆದ್ದುಕೊಂಡ್ರೆ, ಬೆಳ್ಳಿ ಪದಕ ಎಮಿಲಿ ವೈಟ್ ಹೆಡ್ ಪಾಲಾಯ್ತು.

22 ವರ್ಷದ ಅರುಣಾ ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅರುಣಾ ರೆಡ್ಡಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಟ್ರೈನರ್ ಆಗಿ ಕೆಲಸ ಮಾಡ್ತಿದ್ದಾರೆ. 2005ರಲ್ಲಿ ಅರುಣಾ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...