alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಅವಘಡ

ELBOW BREAKರಿಯೋ ಒಲಿಂಪಿಕ್ಸ್ ನಲ್ಲಿ ಅದೆಷ್ಟೋ ಕ್ರೀಡಾಳುಗಳ ಕನಸು ನನಸಾಗ್ತಿದೆ. ಇದರ ನಡುವೆ ಹಲವರ ಪದಕದ ಆಸೆ ಭಗ್ನಗೊಂಡ್ರೆ, ಇನ್ನು ಕೆಲವರಿಗೆ ಭಾರೀ ಆಘಾತವೇ ಎದುರಾಗಿದೆ.

ಫ್ರಾನ್ಸ್ ನ ಜಿಮ್ನಾಸ್ಟ್ ಸಮೀರ್ ಕಾಲು ಮುರಿದುಕೊಂಡಿದ್ರು. ಇದೀಗ ಅರ್ಮೆನಿಯಾದ ವೇಯ್ಟ್ ಲಿಫ್ಟರ್ ಕೂಡ ಕೈ ಮುರಿದುಕೊಂಡಿದ್ದಾರೆ. 195 ಕೆಜಿ ಭಾರ ಎತ್ತುವ ಸ್ಪರ್ಧೆ ವೇಳೆ ಅರ್ಮೆನಿಯಾದ ಅಂದ್ರಾನಿಕ್ ಕರಪೆಟ್ಯನ್ ಕೈ ಮುರಿದುಕೊಂಡಿದ್ದಾರೆ.

ಮೊದಲ ಪ್ರಯತ್ನದಲ್ಲಿ 195 ಕೆಜಿ ಭಾರ ಎತ್ತಲು ಅಂದ್ರಾನಿಕ್ ವಿಫಲರಾದ್ರು. ಎರಡನೇ ಬಾರಿ ಭಾರ ಎತ್ತುವ ಪ್ರಯತ್ನದಲ್ಲಿ ಅವರ ಮೊಣಕೈ ಮುರಿದುಹೋಗಿದೆ. ಎಲುಬು ತುಂಡಾಗುತ್ತಿದ್ದಂತೆ ಅಂದ್ರಾನಿಕ್ ನೋವಿನಿಂದ ಕೂಗಿಕೊಂಡ್ರು. ಸುತ್ತ ನೆರೆದಿದ್ದವರಿಗೂ ಈ ಅವಘಡ ನೋಡಿ ಶಾಕ್ ಆಗಿತ್ತು.

ಮೊಣಕೈ ಮುರಿದುಕೊಂಡ ಅಂದ್ರಾನಿಕ್ ಅವರನ್ನು ಕೂಡಲೇ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಪ್ರಶಸ್ತಿ ಗೆಲ್ಲುವ ಛಲದಿಂದ ಬಂದಿದ್ದ ಕ್ರೀಡಾಪಟು ಭಯಾನಕ ನೋವಿಗೆ ತುತ್ತಾಗಿ ಒಲಿಂಪಿಕ್ಸ್ ನಿಂದ್ಲೇ ಹೊರಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...