alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪುತ್ರನಿಗಾಗಿ ಚಾನ್ಸ್ ಕಳೆದುಕೊಂಡ ಸಾವಿರ ರನ್ ಸರದಾರ

cricket jklop

ಮುಂಬೈ: ಕಳೆದ ಜನವರಿಯಲ್ಲಿ ಕ್ರಿಕೆಟ್ ರಂಗದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿತ್ತು. ಆಟೋ ಚಾಲಕರೊಬ್ಬರ ಪುತ್ರ ಬರೋಬ್ಬರಿ 1009 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದು, ಭಾರೀ ಸುದ್ದಿಯಾಗಿತ್ತು.

ಅಂದು 1009 ರನ್ ಬಾರಿಸಿದ್ದ ಆಟಗಾರನಿಗೆ 16 ವರ್ಷ ವಯೋಮಿತಿಯ ಬಾಲಕರ ತಂಡದಲ್ಲಿ ಆಡಲು ಅವಕಾಶವೇ ಸಿಕ್ಕಿಲ್ಲ. ಆಟೋ ಚಾಲಕನ ಮಗನಾದ ಪ್ರಣವ್ ಧನವಾಡೆ, 323 ಎಸೆತಗಳಲ್ಲಿ 129 ಬೌಂಡರಿ, 59 ಸಿಕ್ಸರ್ ಸಹಿತ 1009 ರನ್ ಗಳಿಸಿ ದಾಖಲೆ ಮಾಡಿದ್ದರು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಅಂತರ ವಲಯ 16 ವರ್ಷ ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಶ್ಚಿಮ ತಂಡದಲ್ಲಿ ಪ್ರಣವ್ ಗೆ ಅವಕಾಶ ಸಿಕ್ಕಿರಲಿಲ್ಲ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವಕಾಶ ಗಿಟ್ಟಿಸಿದ್ದರಾದರೂ, ಪಂದ್ಯಾವಳಿಯ 3 ಇನ್ನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಸಚಿನ್ ಪ್ರಭಾವದಿಂದ ಅರ್ಜುನ್ ಆಯ್ಕೆಯಾಗಿದ್ದು, ಪ್ರಣವ್ ಗೆ ಅವಕಾಶ ತಪ್ಪಿದೆ ಎಂಬ ಮಾತು ಕೇಳಿ ಬರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...