alex Certify ಮಗುವಿನ ಫೋಟೋ ತೆಗೆಯಬೇಡಿ ಎಂದು ವಿರುಷ್ಕಾ ದಂಪತಿ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಫೋಟೋ ತೆಗೆಯಬೇಡಿ ಎಂದು ವಿರುಷ್ಕಾ ದಂಪತಿ ಮನವಿ

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಖಾಸಗಿತನಕ್ಕೆ ಭಂಗ ಮಾಡಬೇಡಿ ಎಂದು ಮನವಿ ಮಾಡಿದ್ದ ಈ ದಂಪತಿ ಇದೀಗ ಮತ್ತೊಮ್ಮೆ ತಮ್ಮ ಮಗಳ ಫೋಟೋವನ್ನ ಕ್ಲಿಕ್ಕಿಸಬೇಡಿ ಎಂದು ಮಾಧ್ಯಮ ಮಿತ್ರರ ಬಳಿ ಮನವಿ ಮಾಡಿದ್ದಾರೆ.

ಮುಂಬೈನ ಸೆಲೆಬ್ರಿಟಿ ಫೋಟೋ ಕ್ಲಿಕ್ಕಿಸುವ ಫೋಟೋಗ್ರಾಫರ್​ ಬಳಿ ಮನವಿ ಮಾಡಿರುವ ದಂಪತಿ ದಯಮಾಡಿ ನಮ್ಮ ಮಗಳ ಖಾಸಗಿತನಕ್ಕೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ನಮ್ಮ ಮೇಲೆ ನೀವಿಟ್ಟಿರುವ ಪ್ರೀತಿಗೆ ಧನ್ಯವಾದ. ಅದೇ ರೀತಿ ನಮ್ಮ ಖಾಸಗಿತನಕ್ಕೂ ಬೆಲೆ ಕೊಡಿ ಎಂದು ವಿರಾಟ್​ ಕೊಹ್ಲಿ ಕೇಳಿದ್ದಾರೆ.

ಪೋಷಕರಾಗಿ ನಿಮ್ಮ ಬಳಿ ಸರಳವಾದ ಮನವಿಯೊಂದನ್ನ ಇಡುತ್ತಿದ್ದೇವೆ. ನಮ್ಮ ಮಗುವಿನ ಖಾಸಗಿತನ ಕಾಪಾಡಲು ನಿಮ್ಮ ಸಹಾಯ ಹಾಗೂ ಬೆಂಬಲದ ಅಗತ್ಯವಿದೆ ಎಂದು ವಿರುಷ್ಕಾ ದಂಪತಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...