alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಿರುಷ್ಕಾ

ಇತ್ತೀಚೆಗೆ ಸೆಲೆಬ್ರಿಟಿ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲಿ ವಿಡಿಯೋ ಒಂದರ ಮೂಲಕ ಮಿಂಚು ಹರಿಸಿದ ಘಟನೆ ನಿಮಗೆ ನೆನಪಿರಬಹುದು. ರಸ್ತೆಯಲ್ಲಿ ಕಸ ಬಿಸಾಡಿದ ನಟ ಅರ್ಹಾನ್ ಸಿಂಗ್ ನ್ನ ಅನುಷ್ಕಾ ಶರ್ಮಾ ಸಖತ್ತಾಗಿಯೇ ಕ್ಲಾಸ್ ತೆಗದುಕೊಂಡಿದ್ದರು. ಈ ವಿಡಿಯೋವನ್ನ ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದರು. ಪತ್ನಿಯ ಸಾಮಾಜಿಕ ಜವಾಬ್ದಾರಿಯನ್ನ ಮೆಚ್ಚಿಕೊಂಡಿದ್ದರು.

ಸುಮಾರು 90 ಲಕ್ಷ ಜನರು ಈ ವಿಡಿಯೋವನ್ನ ವೀಕ್ಷಣೆ ಮಾಡಿದ್ದರು. ಅನುಷ್ಕಾ ಮಾಡಿದ ಕೆಲಸಕ್ಕೆ ಟ್ವೀಟಿಗರು ಮತ್ತು ಜನ ಸಾಮಾನ್ಯರು ಭೇಷ್ ಅಂದಿದ್ದರು. ಆದರೆ ಈ ಘಟನೆ ಇಷ್ಟಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಏಕಂದ್ರೆ ಈ ಘಟನೆ ಇದೀಗ ಕೋರ್ಟ್ ಅಂಗಳಕ್ಕೆ ಶಿಫ್ಟ್ ಆಗಿದೆ. ವಿರುಷ್ಕಾ ದಂಪತಿಯಿಂದ ಅವಮಾನಕ್ಕೊಳಗಾದ ನಟ ಅರ್ಹಾನ್ ಸಿಂಗ್ ಕಾನೂನು ಸಮರಕ್ಕೆ ಮುಂದಾಗಿದ್ದಾನೆ. ಸೋ ಘಟನೆಯ ಸೆಕೆಂಡ್ ಹಾಫ್ನಲ್ಲಿ ವಿರುಷ್ಕಾ ದಂಪತಿ ಕೋರ್ಟ್ ಮೆಟ್ಟಿಲು ಹತ್ತಬೇಕಿದೆ.

ಜೂನ್ 23ರಂದು ಅರ್ಹಾನ್ ಸಿಂಗ್ ವಕೀಲರು ವಿರುಷ್ಕಾ ದಂಪತಿಗೆ ನೊಟೀಸ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ತಿಯೆ ನೀಡಿರುವ ಅರ್ಹಾನ್ ಸಿಂಗ್ ಸದ್ಯ ಬಾಲ್ ನನ್ನ ಕೋರ್ಟ್ನಲ್ಲಿದೆ. ನನ್ನ ಕಾನೂನಾತ್ಮಕ ನಡೆಗೆ ಅವರ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ಹೇಳಲಾರೆ ಎಂದಿದ್ದಾನೆ.

ಈ ಲಕ್ಷುರಿ ಟ್ವೀಟ್ ಬಗ್ಗೆ ಅರ್ಹಾನ್ ತಾಯಿ ಕೂಡ ವಿರುಷ್ಕಾ ದಂಪತಿಯನ್ನ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ತನ್ನ ಮಗನ ಮುಖವನ್ನು ಬ್ಲರ್ ಮಾಡದೆ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದರು. ಅರ್ಹಾನ್ ಸಿಂಗ್ ಕೂಡ ನಾನು ರಸ್ತೆಯಲ್ಲಿ ಎಸೆದ ಕಸಕ್ಕಿಂತ ಅನುಷ್ಕಾ ಬಾಯಲ್ಲಿ ಬಂದ ಮಾತುಗಳು ಕೀಳುಮಟ್ಟದಲ್ಲಿದ್ದವು ಅಂತ ಕಾಮೆಂಟ್ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಅರ್ಹಾನ್ ಸಿಂಗ್ ತಮಗಾದ ಅವಮಾನಕ್ಕೆ ಕೊಹ್ಲಿ ದಂಪತಿಯನ್ನ ಕೋರ್ಟ್ ಮೂಲಕ ಪ್ರಶ್ನೆ ಮಾಡ್ತಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಅನುಷ್ಕಾ ಶರ್ಮಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನೊಟೀಸ್ ಗೆ ಅವರ ಉತ್ತರ ಏನಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...