alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ನೋಡಲು ಬಂದ್ಲು ನಾಯಕನ ‘ಲೇಡಿ ಲಕ್’

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ದೊಡ್ಡ ಸರಣಿ ಎಂದು ಪರಿಗಣಿಸಲಾಗ್ತಿದೆ. ಸತತ ವಿಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ಈ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಮೊದಲ ಟೆಸ್ಟ್ ಪಂದ್ಯದ ಆರಂಭ ಕೂಡ ಚೆನ್ನಾಗಿಯೇ ಆಗಿದೆ. ಟಾಸ್ ಸೋತು ಬೌಲಿಂಗ್ ಶುರು ಮಾಡಿರುವ ಇಂಡಿಯಾ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶೇಷವಾಗಿ ಕಾಣಿಸಿದ್ದು ಅನುಷ್ಕಾ ಶರ್ಮಾ. ಕೊಹ್ಲಿ ಪತ್ನಿ, ನವ ವಧು ಅನುಷ್ಕಾ ಶರ್ಮಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ರು. ಅನುಷ್ಕಾ ಕ್ರೀಡಾಂಗಣಕ್ಕೆ ಬಂದು ಶಿಖರ್ ಧವನ್ ಪತ್ನಿ ಆಯೆಷಾ ಧವನ್ ಹಾಗೂ ರೋಹಿತ್ ಶರ್ಮಾ ಪತ್ನಿ ರಿತಿಕಾ ಜೊತೆ ಪಂದ್ಯ ವೀಕ್ಷಿಸಿದ್ರು.

ಅನುಷ್ಕಾ ಪಂದ್ಯ ವೀಕ್ಷಣೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೊಹ್ಲಿಗೆ ಪ್ರೋತ್ಸಾಹ ನೀಡಲು ಅನುಷ್ಕಾ ಕ್ರೀಡಾಂಗಣಕ್ಕೆ ಬಂದಿದ್ದರು.  ಆದ್ರೆ ಕೊಹ್ಲಿ ಮದುವೆಯಾದ ನಂತ್ರ ಇದು ಮೊದಲ ಪಂದ್ಯ. ಅನುಷ್ಕಾ ಕೊಹ್ಲಿಗೆ ಅದೃಷ್ಟವಂತೆ. ಇದನ್ನು ಈ ಹಿಂದೆ ಕೊಹ್ಲಿ ಹೇಳಿದ್ದಾರೆ. ಟೆಸ್ಟ್ ನಾಯಕತ್ವ ಸಿಗುವ ಸುದ್ದಿ ಕೂಡ ಅನುಷ್ಕಾ ಜೊತೆಗಿದ್ದಾಗಲೇ ಸಿಕ್ಕಿತ್ತಂತೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...