alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲಾನ್ ನಲ್ಲಿ ಅದ್ಧೂರಿ ವಿವಾಹ, ರೋಮ್ ನಲ್ಲಿ ಹನಿಮೂನ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯದಲ್ಲೇ ಹಸೆಮಣೆ ಏರ್ತಿದ್ದಾರೆ ಅನ್ನೋ ಸುದ್ದಿ ಕೇಳಿಬರ್ತಿದೆ. ಡಿಸೆಂಬರ್ ನಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ ಅಂತಾನೇ ಹೇಳಲಾಗ್ತಿದೆ. ಈ ಸ್ಟಾರ್ ಜೋಡಿಯ ಮದುವೆ ಬಗ್ಗೆ ಇನ್ನೊಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಕೂಡ ಸಿಕ್ಕಿದೆ.

ಕೊಹ್ಲಿ ಹಾಗೂ ಅನುಷ್ಕಾ ಇಟಲಿಯ ಮಿಲಾನ್ ನಲ್ಲಿ ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಫ್ಯಾಷನ್ ಗೆ ಹೆಸರುವಾಸಿಯಾಗಿರೋ ಮಿಲಾನ್, ಡೆಸ್ಟಿನೇಶನ್ ವೆಡ್ಡಿಂಗ್ ಗೆ ಹೇಳಿ ಮಾಡಿಸಿದಂತಹ ತಾಣ. ಮದುವೆಯ ಸಿದ್ಧತೆಗಾಗಿ ಅಂತರಾಷ್ಟ್ರೀಯ ವೆಡ್ಡಿಂಗ್ ಪ್ಲಾನರ್ ಗಳನ್ನು ಕೂಡ ಸಂಪರ್ಕಿಸಿದ್ದಾರಂತೆ.

ಇಟಲಿಯಲ್ಲಿ ಮದುವೆ ಹಾಗೂ ರೋಮ್ ನಲ್ಲಿ ಹನಿಮೂನ್ ಆಚರಿಸಲು ವಿರಾಟ್ ಹಾಗೂ ಅನುಷ್ಕಾ ಪ್ಲಾನ್ ಮಾಡಿಕೊಂಡಿದ್ದಾರಂತೆ. ಧೋನಿ ಹೊರತುಪಡಿಸಿ ಉಳಿದ ಎಲ್ಲಾ ಕ್ರಿಕೆಟಿಗರು ಹಾಗೂ ಸ್ನೇಹಿತರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗ್ಲೇ ಲಂಕಾ ಸರಣಿಯಿಂದ ಕೊಹ್ಲಿ ಬ್ರೇಕ್ ಕೇಳಿದ್ದು, ಮದುವೆ ವದಂತಿಗೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಆದ್ರೆ ಅನುಷ್ಕಾ ಶರ್ಮಾಳ ವಕ್ತಾರರು ಮಾತ್ರ ಸದ್ಯಕ್ಕಿಲ್ಲ ಮದುವೆ ಎನ್ನುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...