alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರ ದಿನದಂದು ಕೊಹ್ಲಿಗೆ ಅನುಷ್ಕಾ ವಿಶ್ ಮಾಡಿದ್ದು ಹೀಗೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೆಸ್ಟ್ ದಂಪತಿ ಮಾತ್ರವಲ್ಲ ಒಳ್ಳೆ ಸ್ನೇಹಿತರು ಕೂಡ. ಆಗಸ್ಟ್ 5, ಭಾನುವಾರ ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಗಿದೆ. ಕೊಹ್ಲಿ ಹಾಗೂ ಅನುಷ್ಕಾ ಕೂಡ ಸುಂದರ ಫೋಟೋ ಮೂಲಕ ಸ್ನೇಹಿತರ ದಿನದ ಶುಭ ಕೋರಿದ್ದಾರೆ.

ಕೊಹ್ಲಿ ಹಾಗೂ ಅನುಷ್ಕಾ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಫೋಟೋ ಹಾಕಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಶುಭಕೋರಿದ್ದಾರೆ. ಸದ್ಯ ಕೊಹ್ಲಿ ಜೊತೆ ಅನುಷ್ಕಾ ಕೂಡ ಇಂಗ್ಲೆಂಡ್ ನಲ್ಲಿದ್ದಾರೆ. ಇಂಗ್ಲೆಂಡ್ ನಲ್ಲಿ ಒಟ್ಟಿಗಿರುವ ಅನೇಕ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ.

ಆಗಸ್ಟ್ 2 ರಂದು ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಕೊಹ್ಲಿ ವೆಡ್ಡಿಂಗ್ ರಿಂಗ್ ಗೆ ಮುತ್ತಿಟ್ಟು, ಕ್ರೀಡಾಂಗಣದಲ್ಲಿದ್ದ ಅನುಷ್ಕಾರಿಗೆ ತಮ್ಮ ಶತಕ ಅರ್ಪಿಸಿದ್ರು. ವಿರಾಟ್ ಶತಕ ಸಿಡಿಸುತ್ತಿದ್ದಂತೆ ಅನುಷ್ಕಾ ಕೂಡ ಅವ್ರ ಸಂತೋಷದಲ್ಲಿ ಭಾಗಿಯಾಗಿದ್ರು. ಸದ್ಯ ಅನುಷ್ಕಾ ಸೂಯಿ ದಾಗ್ ಹಾಗೂ ಝೀರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡೂ ಚಿತ್ರದ ಶೂಟಿಂಗ್ ಮುಗಿದಿದ್ದು, ಇಂಗ್ಲೆಂಡ್ ಗೆ ತೆರಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...