alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ- ಪಾಕ್ ಕ್ರಿಕೆಟ್: ಹೀಗಿದೆ ಪ್ರತಿಕ್ರಿಯೆ

Fans of Pakistan's cricket team (L) and India's (R) cheer in the stands before Pakistan's Cricket World Cup match against India in Adelaide, February 15, 2015. REUTERS/David Gray (AUSTRALIA - Tags: SPORT CRICKET)

ಕರಾಚಿ: ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಮುಂದುವರೆಸುವುದಿಲ್ಲ. ಆ ಬಗ್ಗೆ ಯೋಚನೆ ಕೂಡ ಇಲ್ಲ ಎಂದು ಬಿ.ಸಿ.ಸಿ.ಐ. ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಕ್ಕೆ ಪಾಕ್ ನಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಕಚೇರಿ ಮೇಲೆ, ಪಾಕ್ ಪ್ರೇರೇಪಿತ ಉಗ್ರರು ದಾಳಿ ಮಾಡಿದ ನಂತರದಲ್ಲಿ ನಡೆದ ಬೆಳವಣಿಗೆಗಳಿಂದ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸಂಬಂಧ ಮತ್ತೆ ಆರಂಭಿಸುವುದು ಅಸಾಧ್ಯ ಎಂದು ಅನುರಾಗ್ ಠಾಕೂರ್ ಹೇಳಿದ್ದರು. ಇದಕ್ಕೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧ ಉತ್ತಮವಾಗುವವರೆಗೂ ನಮ್ಮೊಂದಿಗೆ ಆಡಲು ಭಾರತ ನಿರಾಕರಿಸಿದೆ. ಕಳೆದ 8 ವರ್ಷಗಳಿಂದ ಸರಣಿ ನಡೆಯುವುದನ್ನು ಎದುರು ನೋಡುತ್ತಿದ್ದೇನೆ ಎಂದು ಯೂಸುಫ್ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು, ಅನುರಾಗ್ ಠಾಕೂರ್ ಅವರ ಹೇಳಿಕೆಯಿಂದ ಬೇಸರವಾಗಿದ್ದು, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನಲ್ಲಿ ರಾಜಕೀಯ ಬರಬಾರದೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...