alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆ

bcci-s-court-dd

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಇನ್ನೂ ಪ್ರಕಟಿಸದ ಕಾರಣಕ್ಕೆ, ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನೀವು ಹಣವನ್ನು ಆಯ್ಕೆ ಮಾಡಿಕೊಳ್ಳುವಿರಾ ಇಲ್ಲವೇ ಕ್ರಿಕೆಟ್ ಅನ್ನು ಆಯ್ಕೆ ಮಾಡಕೊಳ್ಳುವಿರಾ ಎಂದು ಕೋರ್ಟ್ ಬಿ.ಸಿ.ಸಿ.ಐ.ಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳಿಗೆ ಪ್ರಶ್ನಿಸಿದೆ.

ಕೂಡಲೇ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವಂತೆ ತಾಕೀತು ಮಾಡಿದೆ.

ಇಂಗ್ಲೆಂಡ್ ನಲ್ಲಿ ನಡೆಯುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಏಪ್ರಿಲ್ 25 ರೊಳಗೆ ತಂಡವನ್ನು ಪ್ರಕಟಿಸುವಂತೆ ಐ.ಸಿ.ಸಿ. ಸೂಚನೆ ನೀಡಿತ್ತು.

ಆದಾಯ ಹಂಚಿಕೆ ಕುರಿತಾಗಿ ಬಿ.ಸಿ.ಸಿ.ಐ. ಮತ್ತು ಐ.ಸಿ.ಸಿ. ನಡುವೆ ಹಗ್ಗಜಗ್ಗಾಟ ನಡೆದ ಕಾರಣ ತಂಡವನ್ನು ಪ್ರಕಟಿಸಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಬಿ.ಸಿ.ಸಿ.ಐ. ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ತಂಡವನ್ನು ಪ್ರಕಟಿಸುವಂತೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...