alex Certify
ಕನ್ನಡ ದುನಿಯಾ       Mobile App
       

Kannada Duniya

“ವಿನೋದ್ ಕಾಂಬ್ಳಿ ಪತ್ನಿ ನನ್ನ ತಂದೆಗೆ ಹೊಡೆದಿದ್ದಾರೆ’’

ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಹಾಗೂ ಅವ್ರ ಪತ್ನಿ ವಿರುದ್ಧ ಹಾಡುಗಾರ ಅಂಕಿತ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ. ವಿನೋದ್ ಕಾಂಬ್ಳಿ ಪತ್ನಿ ತನ್ನ ತಂದೆಗೆ ಹೊಡೆದಿದ್ದಾರೆಂದು ಅಂಕಿತ್ ತಿವಾರಿ ಆರೋಪ ಮಾಡಿದ್ದಾರೆ. ಪೀಡಿತ 58 ವರ್ಷದ ರಾಜೇಂದ್ರ ಕುಮಾರ್ ತಿವಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಭಾನುವಾರ ಮುಂಬೈ ಮಾಲ್ ನಲ್ಲಿ  ನಡೆದ ಘಟನೆ ಬಗ್ಗೆ ಕಾಂಬ್ಳಿ ಕೂಡ ದೂರು ನೀಡಲು ಮುಂದಾಗಿದ್ದಾರೆ.

ಭಾನುವಾರ್ ಅಂಕಿತ್ ತಂದೆ ರಾಜೇಂದ್ರ ಹಾಗೂ ಮಗಳ ಜೊತೆ ಮಾಲ್ ಗೆ ಹೋಗಿದ್ದರಂತೆ. ಮಗಳು ಆಟವಾಡಲು ಬಯಸಿದ್ದರಿಂದ ರಾಜೇಂದ್ರ ಮೊಮ್ಮಗಳನ್ನು ಕರೆದುಕೊಂಡು ಆಟವಾಡುವ ಸ್ಥಳಕ್ಕೆ ಹೋಗ್ತಿದ್ದರಂತೆ. ಈ ವೇಳೆ ರಾಜೇಂದ್ರ ಕೈ ತಗುಲಿದೆ ಎನ್ನುವ ಕಾರಣ ನೀಡಿ ರಾಜೇಂದ್ರ ಎಡ ಕೆನ್ನೆಗೆ ಹೊಡೆದಿದ್ದಾರಂತೆ ಕಾಂಬ್ಳಿ ಪತ್ನಿ.

ರಾಜೇಂದ್ರ ಕಣ್ಣಿಗೆ ಗಾಯವಾಗಿದ್ದು, ಸಿಸಿ ಟಿವಿಯಲ್ಲಿ ಇದನ್ನು ನೋಡಿ. ತಂದೆ ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ. ಜನರ ಸಂಖ್ಯೆ ಹೆಚ್ಚಿದ್ದರಿಂದ ಕೈ ತಗುಲಿರಬಹುದು. ತಂದೆಗೆ ಯಾವುದೇ ದುರುದ್ದೇಶವಿರಲಿಲ್ಲ. ಕಾಂಬ್ಳಿ ಪತ್ನಿ ಸೆಲೆಬ್ರಿಟಿ ಎನ್ನುವ ಅಹಂಕಾರದಲ್ಲಿ ಹೀಗೆ ಮಾಡಿದ್ದಾರೆಂದು ಅಂಕಿತ್ ದೂರಿದ್ದಾರೆ.

ಮಾಲ್ ನಲ್ಲಿ ನನ್ನ ಪತ್ನಿ ಮೇಲೆ ಕಿರುಕುಳ ನಡೆದಿದೆ. ಈ ಬಗ್ಗೆ ನಾನು ದೂರು ನೀಡುತ್ತೇನೆಂದು ಕಾಂಬ್ಳಿ ಕೂಡ ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...