alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಸಿ.ಸಿ.ಐ. ಅಧಿಕಾರಿಯಿಂದ ಬಯಲಾಯ್ತು ಕೊಹ್ಲಿ, ಕುಂಬ್ಳೆ ರಹಸ್ಯ

anil-kol

ಮುಂಬೈ: ಸಂಭಾವನೆ ವಿಚಾರದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಅಭಿಪ್ರಾಯ ಭೇದ ಇರುವುದನ್ನು ಬಿ.ಸಿ.ಸಿ.ಐ. ಅಧಿಕಾರಿ ಬಿಚ್ಚಿಟ್ಟಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ಕುಂಬ್ಳೆ ಸ್ಥಾನಕ್ಕೆ ಬೇರೆಯವರು ಬರಲಿದ್ದಾರೆ. ಕುಂಬ್ಳೆ ಅವರ ಒಪ್ಪಂದವನ್ನು ಬಿ.ಸಿ.ಸಿ.ಐ. ಮುಂದುವರೆಸದಿರಲು ನಿರ್ಧರಿಸಿರುವುದರ ಹಿಂದೆ ಕೊಹ್ಲಿ ಪಾತ್ರ ಕೂಡ ಇದೆ.

ಕುಂಬ್ಳೆ ಅವರ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಅವರ ಕಾರ್ಯಶೈಲಿಯ ಕುರಿತಾಗಿ ಕೊಹ್ಲಿಗೆ ಅಸಮಾಧಾನವಿದೆ. ಹೆಚ್ಚಿನ ಸಂಭಾವನೆ ಕೇಳುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿ.ಸಿ.ಸಿ.ಐ. ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಯಕನಿಗೆ ಹೆಚ್ಚಿನ ಸಂಭಾವನೆ ನೀಡಬೇಕೆಂಬುದು ಕುಂಬ್ಳೆ ಬೇಡಿಕೆಯಾಗಿದ್ದು, ಇಂತಹ ಬೇಡಿಕೆಯನ್ನು ಸ್ವತಃ ಕೊಹ್ಲಿಯೇ ಇಟ್ಟಿಲ್ಲ. ಇನ್ನು ತಂಡದ ಯಶಸ್ಸಿನ ಲಾಭವನ್ನು ತಾವೊಬ್ಬರೇ ಪಡೆಯುವ ಪ್ರಯತ್ನವನ್ನು ಕುಂಬ್ಳೆ ಮಾಡಿದ್ದಾರೆ. ಯಶಸ್ಸಿಗೆ ಎಲ್ಲರೂ ಕಾರಣರು ಎಂದು ಅಧಿಕಾರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...