alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಿಲ್ ಕುಂಬ್ಳೆ

555anil_kumble_1497967683_749x421

ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಕುಂಬ್ಳೆ ಬಿಸಿಸಿಐಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಇದಕ್ಕೂ ಮೊದಲು ಕುಂಬ್ಳೆ ಬಿಟ್ಟು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ.

ಕೆಲ ದಿನಗಳಿಂದ ಬಿಸಿಸಿಐ, ಹೊಸ ಕೋಚ್ ಹುಡುಕಾಟದಲ್ಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳೂ ಅನೇಕ ದಿನಗಳ ಹಿಂದಿನಿಂದಲೇ ಕೇಳಿ ಬರ್ತಾ ಇದೆ. ಮಾಹಿತಿ ಪ್ರಕಾರ, ಕೋಚ್ ಸ್ಥಾನದಿಂದ ಕುಂಬ್ಳೆಯನ್ನು ತೆಗೆಯುವಂತೆ ಕೊಹ್ಲಿ ಒತ್ತಾಯ ಮಾಡಿದ್ದಾರೆನ್ನಲಾಗಿದೆ. ಹಿಂದಿನ ವರ್ಷ ಕುಂಬ್ಳೆಯವರನ್ನು ಆಯ್ಕೆ ಮಾಡಲಾಗಿತ್ತು. ಜೂನ್ 18ರಂದೇ ಕುಂಬ್ಳೆ ಅಧಿಕಾರಾವಧಿ ಮುಗಿದಿದೆ.

ಮಂಗಳವಾರ ಟೀಂ ಇಂಡಿಯಾ ಲಂಡನ್ ನಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದೆ. ಆದ್ರೆ ಇಂಡಿಯಾ ತಂಡದ ಜೊತೆ ಕುಂಬ್ಳೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿಲ್ಲ. ಮೀಟಿಂಗ್ ಕಾರಣ ಅವರು ದಕ್ಷಿಣ ಆಫ್ರಿಕಾಕ್ಕೆ ಹೋಗಿಲ್ಲ ಎನ್ನಲಾಗ್ತಾ ಇತ್ತು. ಆದ್ರೆ ಸಂಜೆ ವೇಳೆಗೆ ರಾಜೀನಾಮೆ ನೀಡಿದ್ದಾರೆಂಬ ಸುದ್ದಿ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...