alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆಗೆ ಬಾಕಿ ಮೊತ್ತ ಪಾವತಿಸಿದ ಬಿ.ಸಿ.ಸಿ.ಐ.

a-kumlbd

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಿಕಟಪೂರ್ವ ಕೋಚ್ ಅನಿಲ್ ಕುಂಬ್ಳೆ ಅವರಿಗೆ ನೀಡಬೇಕಿದ್ದ ಬಾಕಿ ಸಂಭಾವನೆ ಮೊತ್ತವನ್ನು ಬಿ.ಸಿ.ಸಿ.ಐ. ನೀಡಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಮನಸ್ತಾಪದಿಂದಾಗಿ ಪ್ರಧಾನ ಕೋಚ್ ಹುದ್ದೆಗೆ ಅವಧಿಗೂ ಮೊದಲೇ ಕುಂಬ್ಳೆ ರಾಜೀನಾಮೆ ನೀಡಿದ್ದರು.

ಅವರಿಗೆ ಮೇ ಮತ್ತು ಜೂನ್ ತಿಂಗಳ ಸೇವೆಗೆ ವೃತ್ತಿಪರ ಶುಲ್ಕವಾಗಿ 48.75 ಲಕ್ಷ ರೂ. ಪಾವತಿಸಲಾಗಿದೆ. ಬಿ.ಸಿ.ಸಿ.ಐ. 25 ಲಕ್ಷಕ್ಕೂ ಅಧಿಕ ಮೊತ್ತದ ಹಣ ಪಾವತಿ ಮಾಡಿದ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ದೂರವಾದ ಬಳಿಕ ರವಿಶಾಸ್ತ್ರಿ ಪ್ರಧಾನ ಕೋಚ್ ಆಗಿದ್ದಾರೆ. 2019 ರ ಏಕದಿನ ವಿಶ್ವಕಪ್ ವರೆಗೂ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...