alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಕುಂಬ್ಳೆ ರಾಜೀನಾಮೆ ರಹಸ್ಯ

kumble

ವೆಸ್ಟ್ ಇಂಡೀಸ್ ಪ್ರವಾಸದವರೆಗೂ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರೆಯುವಂತೆ ಬಿ.ಸಿ.ಸಿ.ಐ. ಸೂಚಿಸಿದ್ದರೂ, ಅನಿಲ್ ಕುಂಬ್ಳೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ತಾವು ರಾಜೀನಾಮೆ ನೀಡಲು ಕಾರಣವಾದ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ. ಮಂಗಳವಾರ ರಾತ್ರಿ ಅನಿರೀಕ್ಷಿತವಾಗಿ ಕುಂಬ್ಳೆ ರಾಜೀನಾಮೆ ನೀಡಿದಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು.

ಟ್ವಿಟರ್ ನಲ್ಲಿ ತಮ್ಮ ರಾಜೀನಾಮೆಗೆ ಕಾರಣವನ್ನು ತಿಳಿಸಿರುವ ಕುಂಬ್ಳೆ, ಟೀಂ ಇಂಡಿಯಾ ಕೋಚ್ ಆಗುವ ಅವಕಾಶ ಸಿಕ್ಕಿದ್ದು, ನನಗೆ ದೊರೆತ ಗೌರವ ಎಂದು ಭಾವಿಸುತ್ತೇನೆ. ಯಾವುದೇ ತಂಡದ ಯಶಸ್ಸು, ನಾಯಕ, ಕೋಚ್, ಆಟಗಾರರು ಮತ್ತು ಸಿಬ್ಬಂದಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ನನ್ನ ಕಾರ್ಯಶೈಲಿ ಮತ್ತು ಕೋಚ್ ಆಗಿ ಮುಂದುವರೆಯಲು ನಾಯಕನಿಗೆ ತೊಂದರೆಯಾಗಿದೆ ಎಂದು ಬಿ.ಸಿ.ಸಿ.ಐ. ನನಗೆ ಹೇಳಿತ್ತು. ಹೊಂದಾಣಿಕೆ ಪರಿಣಾಮಕಾರಿಯಾಗಿರಲು ವೃತ್ತಿಪರತೆ, ಶಿಸ್ತು, ಕೌಶಲ್ಯ ಮೊದಲಾದವು ಮುಖ್ಯವೆನಿಸುತ್ತವೆ. ಆದರೆ, ಆತ ಯಾರಿಗೂ ಜಗ್ಗಲ್ಲ. ಇಂತಹ ಸಂದರ್ಭದಲ್ಲಿ ಹೊಂದಾಣಿಕೆ ಅಸಮರ್ಥನೀಯ ಎಂದು ಕಂಡು ಬಂದಿದ್ದರಿಂದ ಹುದ್ದೆಯಲ್ಲಿ ಮುಂದುವರೆಯದಿರಲು ತೀರ್ಮಾನಿಸಿದ್ದೇನೆ. ಇಷ್ಟು ದಿನ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹಿಂದೆಯೇ ಹೇಳಲಾಗಿತ್ತಾದರೂ, ಈಗ ಮಾಹಿತಿಯನ್ನು ಕುಂಬ್ಳೆ ಬಹಿರಂಗಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...