alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ವಿಶಿಷ್ಟ ಕಾರ್ಟೂನ್ ಮೂಲಕ ಅಭಿನಂದಿಸಿದ ಅಮೂಲ್

ಇಂಗ್ಲೆಂಡ್‌ನ ಮಣ್ಣಿನಲ್ಲಿ ಚೊಚ್ಚಲ ಟೆಸ್ಟ್‌ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಅಮೂಲ್‌, ಕಾರ್ಟೂನ್‌ ಮೂಲಕ ಗೌರವ ಸೂಚಿಸಿದೆ.

ಐದು ಗಂಟೆಗಳಿಗೂ ಹೆಚ್ಚು ಕಾಲ ಮೈದಾನದಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಿ, 225 ಎಸೆತಗಳಲ್ಲಿ 149 ರನ್‌ ಪೇರಿಸಿದ ಕೊಹ್ಲಿಗೆ ಶುಭಾಷಯ ಕೋರಿದೆ.

ತೆಪ್ಪವೊಂದು ಸಮುದ್ರದಲ್ಲಿದ್ದು, ವಿರಾಟ್‌ ಕೊಹ್ಲಿ ಒಬ್ಬರೇ ಬ್ಯಾಟ್‌ ಹಿಡಿದು ನಿಂತಿರುವಂತೆ ಕಾರ್ಟೂನ್‌ ಬರೆಯಲಾಗಿದ್ದು, ಇದಕ್ಕೆ ಟವರ್ಸ್‌ ಅಬೌವ್‌ ಅದರ್ಸ್‌ ಎಂದು ಟ್ಯಾಗ್‌ಲೈನ್‌ ಕೊಟ್ಟಿದೆ. ಏಕಾಂಗಿ ಹೋರಾಟವನ್ನು ಚಿತ್ರಿಸಿರುವ ಕಾರ್ಟೂನ್‌ಗೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ.

ಶತಕದ ಆಟ ಆಡುವ ಮೂಲಕ ಕೊಹ್ಲಿ ಇಂಗ್ಲೆಂಡ್‌ ಎದುರು 1 ಸಾವಿರ ರನ್‌ ಪೇರಿಸಿದ ಭಾರತದ 13ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೊಹ್ಲಿಯ ಸಾಧನೆಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಅಭಿನಂದಿಸಿದರೆ, ಇನ್ನೂ ಕೆಲವರು ಅನುಷ್ಕಾ ಶರ್ಮರ ಹೆಸರಿನೊಂದಿಗೆ ಕಾಲೆಳೆದಿದ್ದಾರೆ. ಕೊಹ್ಲಿಯ ಅತ್ಯುತ್ತಮ ಪ್ರದರ್ಶನದಿಂದ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಯಶವಾಗಿರುವುದಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...