alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಕ್ರಿಕೆಟರ್ ಜೊತೆ ಪಾರ್ಟಿ ಮಾಡಿದ ಬಿಗ್ ಬಿ

big b gale

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮುಂಬೈನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಹಿಂದೆಯೇ ಇವರಿಬ್ಬರ ನಡುವೆ ಆತ್ಮೀಯತೆ ಇತ್ತಾದರೂ, ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಕ್ರಿಸ್ ಗೇಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಗಳಿಸಿದ್ದರು. ಈ ಪಂದ್ಯದ ನಂತರ ಗೇಲ್ ಅವರನ್ನು ಅಮಿತಾಬ್ ಭೇಟಿಯಾಗಲು ಬಯಸಿದ್ದರಂತೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಅಮಿತಾಬ್ ಕ್ಷಮೆ ಕೇಳಿದ್ದರು. ತಮ್ಮನ್ನು ಮುಂಬೈನಲ್ಲಿ ಭೇಟಿಯಾಗದಿರುವುದಕ್ಕೆ ಕ್ಷಮೆ ಕೋರುತ್ತೇನೆ ಎಂದು ಬಿಗ್ ಬಿ ಹೇಳಿದ್ದರು.

ಹೀಗಾಗಿ ಗೇಲ್ ಅವರಿಗಾಗಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು ಬಿಗ್ ಬಿ. ಮುಂಬೈನ ತಮ್ಮ ನಿವಾಸದಲ್ಲಿ ಗೇಲ್ ಅವರಿಗಾಗಿಯೇ ಪಾರ್ಟಿ ನಡೆಸಿದ ಅಮಿತಾಬ್, ವಿವಿಧ ಖಾದ್ಯ ಹಾಗೂ ವೈನ್ ನೀಡಿ ಸತ್ಕರಿಸಿದ್ದಾರೆ. ಅಲ್ಲದೇ, ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಮಿತಾಬ್ ಆತಿಥ್ಯಕ್ಕೆ ಗೇಲ್ ಮಾರುಹೋಗಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್ ಅಮಿತಾಬ್ ಅವರಿಗೆ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...