alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಾಧ್ಯವಾದುದನ್ನು ಸಾಧಿಸಿದ್ದಾರೆ ಈ ಕ್ರೀಡಾಪಟು

8964broadford2

ಸಿಡ್ನಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಮುಖ್ಯ. ಛಲವಿದ್ದರೆ ಏನನ್ನಾದರೂ ಸಾಧಿಸಿ ಗುರಿ ತಲುಪಬಹುದು ಎಂಬುದಕ್ಕೆ ಇಲ್ಲೊಬ್ಬ ಉದಾಹರಣೆಯಾಗಿದ್ದಾನೆ.

ತನಗಿರುವುದು ಒಂದೇ ಕಾಲು, ಒಂದೇ ಕೈ ಎಂದು ಬೇಸರಪಟ್ಟುಕೊಳ್ಳದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಬೈಕ್ ರೈಡರ್ ಆಗಿ ಗಮನ ಸೆಳೆದಿದ್ದಾನೆ ಈ ಸಾಧಕ. ಅಲೆನ್ ಕೆಂಪ್ ಸ್ಟರ್ ಎಂಬುದು ಇವರ ಹೆಸರು. ಬೈಕ್ ರೇಸ್ ನಲ್ಲಿ ಪಾಲ್ಗೊಳ್ಳುವುದು ಇವರ ಹವ್ಯಾಸ.

ಹೀಗಿರುವಾಗ ಒಮ್ಮೆ ರೇಸ್ ನಲ್ಲಿ ಭಾಗವಹಿಸಿದ್ದ ವೇಳೆ ಬೇರೆ ಸವಾರನ ಬೇಜವಾಬ್ದಾರಿಯಿಂದಾಗಿ ಈತ ಅಪಘಾತದಲ್ಲಿ ತನ್ನ ಒಂದು ಕೈ ಹಾಗೂ ಕಾಲು ಕಳೆದುಕೊಳ್ಳಬೇಕಾಯಿತು. ಹೀಗೆ ಅಪಘಾತದಲ್ಲಿ ತನ್ನ ಬಲ ಕೈ ಮತ್ತು ಕಾಲು ಕಳೆದುಕೊಂಡರೂ ಮೂಲೆಯಲ್ಲಿ ಕುಳಿತುಕೊಳ್ಳಲಿಲ್ಲ ಅಲೆನ್.

ಹೊಸ ಕನಸುಗಳೊಂದಿಗೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ, 400 ಸಿಸಿ ಹೋಂಡಾ ಬೈಕ್ ನ ಎಲ್ಲಾ ಭಾಗಗಳನ್ನು ಎಡಭಾಗಕ್ಕೆ ಬದಲಿಸಿಕೊಂಡು. ಕಠಿಣ ಅಭ್ಯಾಸ ನಡೆಸಿದ ಪ್ರಯತ್ನ ಫಲಿಸಿತು. ಅವರ ಆಸೆ ಕೈಗೂಡಿತು. ಇದರ ಪರಿಣಾಮ ಆತನೀಗ ಖ್ಯಾತ ಬೈಕ್ ರೈಡರ್ ಆಗಿ ಗಮನ ಸೆಳೆದಿದ್ದಾರೆ. ಮಾತ್ರವಲ್ಲ ಅಲೆನ್ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...