alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ದುಬಾರಿ ಗೋಲ್‌ ಕೀಪರ್‌ ಯಾರು ಗೊತ್ತಾ…?

ಎಎಸ್‌ ರೋಮಾ ಫುಟ್‌ ಬಾಲ್‌ ತಂಡದ ಗೋಲ್‌ ಕೀಪರ್‌ ಅಲಿಸನ್‌ ಇದೀಗ ಅತ್ಯಂತ ದುಬಾರಿ ಗೋಲ್‌ ಕೀಪರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಿವರ್‌ ಪೂಲ್‌ ಜೊತೆಗೆ 84 ಮಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ತಮ್ಮ ಆಟದ ವೃತ್ತಿಯಲ್ಲಿ ಹೊಸ ಅಧ್ಯಯನ ಆರಂಭಿಸಲಿದ್ದಾರೆ.

ಲಿವರ್‌ ಪೂಲ್‌ ಸಂಸ್ಥೆ ಜತೆ ಕೈಜೋಡಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದೂ ಅಲಿಸನ್‌ ಹೇಳಿಕೊಂಡಿದ್ದಾರೆ. ಲಿವರ್‌ ಪೂಲ್‌ ಸಂಸ್ಥೆ ವ್ಯವಸ್ಥಾಪಕ, ಅಲಿಸನ್‌ನ ಜತೆ ನಡೆಸಿರುವ ಒಡಂಬಡಿಕೆ ಅತ್ಯಂತ ಆಶಾಯದಾಯಕವಾಗಿರುವಂತಹುದು. ಇದರಿಂದ ಆಟಗಾರನಿಗೂ, ಸಂಸ್ಥೆಗೂ ಸಾಕಷ್ಟು ಒಳಿತಾಗಲಿದೆ. ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ಯಾವುದೇ ಸಮಸ್ಯೆ ಇಲ್ಲದ ಕಾರಣ, ಅಲಿಸನ್‌ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಅಲಿಸನ್‌ ನಿರ್ಧಾರವನ್ನು ರೋಮ ತಂಡದ ನಿರ್ದೇಶಕ ಮೊಂಚಿ ಸ್ವಾಗತಿಸಿದ್ದು, ತಮ್ಮ ಆಟಗಾರ ಲಿವರ್‌ ಪೂಲ್‌ ಗೆ ಮಾರಾಟವಾಗಿರುವುದು ಬೇಸರವೇ. ಆದರೆ ಇದನ್ನು ತಡೆಯುವುದು ಕಷ್ಟ ಎಂದಿದ್ದಾರೆ. ಈ ಬಗ್ಗೆ ಲಿವರ್‌ ಪೂಲ್‌ ಹಾಗೂ ಎಎಸ್‌ ರೋಮ ಸಂಸ್ಥೆಯ ಟ್ವಿಟರ್‌ ಪೇಜ್‌ಗಳೂ ಶುಭಾಶಯ, ಅಭಿನಂದನೆಗಳನ್ನ ಕೋರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...