alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ದಾಖಲೆ ಮುರಿಯಲಿದ್ದಾರೆ ಆಲಿಸ್ಟರ್ ಕುಕ್

Cricket - Pakistan v England - First Test - Zayed Cricket Stadium, Abu Dhabi, United Arab Emirates - 15/10/15 England's Alastair Cook in action Action Images via Reuters / Jason O'Brien Livepic

ಕ್ರಿಕೆಟ್ ದೇವರು ಮಾಡಿದ ದಾಖಲೆ ಒಂದೆರಡಲ್ಲ. ಹೌದು, ಕ್ರಿಕೆಟ್ ದೇವರೆಂದೇ ಖ್ಯಾತರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದಾಖಲೆ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯನ್ನು ಮುರಿಯುವತ್ತ ಮತ್ತೊಬ್ಬ ಆಟಗಾರ ದಾಪುಗಾಲಿಟ್ಟಿದ್ದಾರೆ.

ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಹಾಗೂ ಟೆಸ್ಟ್ ತಂಡದ ನಾಯಕರಾಗಿರುವ ಆಲಿಸ್ಟರ್ ಕುಕ್, ಕೇವಲ 36 ರನ್ ಬಾರಿಸಿದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಲಿದ್ದಾರೆ. ಸಚಿನ್ ತೆಂಡೂಲ್ಕರ್ 10,000 ರನ್ ಗಳಿಸಿದ ಸಂದರ್ಭದಲ್ಲಿ ಅವರ ವಯಸ್ಸು 31 ವರ್ಷ, 10 ತಿಂಗಳು. ಈಗಷ್ಟೇ 31ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಆಲಿಸ್ಟರ್ ಕುಕ್, 9964 ರನ್ ಗಳಿಸಿದ್ದು, ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 10,000 ರನ್ ಪೂರೈಸಲಿದ್ದಾರೆ.

2015 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 836 ನಿಮಿಷ ಕ್ರೀಸ್ ನಲ್ಲಿ ಇದ್ದ ಆಲಿಸ್ಟರ್ ಕುಕ್ 263 ರನ್ ಗಳಿಸಿ ಅತಿಹೆಚ್ಚು ಕಾಲ ಕ್ರೀಸ್ ನಲ್ಲಿ ಬ್ಯಾಟಿಂಗ್ ಮಾಡಿದ ಆಟಗಾರ ಎನಿಸಿಕೊಂಡಿದ್ದರು. ಟೆಸ್ಟ್ ನಲ್ಲಿ ಅವರು 28 ಶತಕ, 47 ಅರ್ಧ ಶತಕ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...