alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಇಂಥಾ ಅವಮಾನ…!

ಭಾರತದ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ತಂಡಕ್ಕೆ ಅವಮಾನ ಮಾಡಲಾಗಿದೆ. Aizwal FC ತಂಡದ ಆಟಗಾರರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಕುಳಿತು ಕೋಲ್ಕತ್ತಾದಿಂದ ಗುವಾಹಟಿಗೆ ಪ್ರಯಾಣ ಮಾಡಿದ್ದಾರೆ.

ನೈಕಿ ಪ್ರೀಮಿಯರ್ ಕಪ್ ನ ಯು-15 ಪಂದ್ಯದಲ್ಲಿ ಪಾಲ್ಗೊಂಡಿದ್ದ ಆಟಗಾರರು ಮಿನರ್ವ ಪಂಜಾಬ್ ಎಫ್ ಸಿ ವಿರುದ್ಧ ಸೋಲಿನ ಬಳಿಕ ಗೋವಾದಿಂದ ವಾಪಸ್ಸಾಗಿದ್ದರು. ಗೋವಾದಿಂದ ಕೋಲ್ಕತ್ತಾಗೆ ರೈಲಿನಲ್ಲೇ ಬಂದಿಳಿದ ಆಟಗಾರರು, ಅಲ್ಲಿಂದ ಗುವಾಹಟಿಗೆ ತೆರಳಲು ಮತ್ತೊಂದು ರೈಲು ಏರಿದ್ದಾರೆ.

ಗುವಾಹಟಿಗೆ ತೆರಳುವ ರೈಲಿನಲ್ಲಿ ಎಲ್ಲಾ ಆಟಗಾರರಿಗೆ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ಅನಿವಾರ್ಯವಾಗಿ ಅವರು ಶೌಚಾಲಯದ ಬಳಿ ನೆಲದ ಮೇಲೆ ಕುಳಿತು ಪ್ರಯಾಣಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...