alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನ ಆಟಗಾರ ಅಹ್ಮದ್ ಶೆಹಝಾದ್​​ ಉದ್ದೀಪನ​​ ಮದ್ದು ಸೇವನೆ ಮಾಡಿದ್ದು, ಸಾಬೀತಾಗಿದೆ. ದೇಶಿಯ ಟೂರ್ನಿಯ ವೇಳೆ ನಡೆಸಿದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅಹ್ಮದ್​ ಫೇಲ್​ ಆಗಿದ್ದಾರೆ. ಹೀಗಾಗಿ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರುವ ಸಾಧ್ಯತೆ ಇದೆ. ಇದ್ರಿಂದ 26 ವರ್ಷದ ಬ್ಯಾಟ್ಸ್​​ಮನ್​ ಅಹ್ಮದ್​ ಕ್ರಿಕೆಟ್​ ಜೀವನಕ್ಕೆ ಪೆಟ್ಟು ಬಿದ್ದಿದೆ.

ಈ ಬಗ್ಗೆ ಮಂಗಳವಾರ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​​ ಹೇಳಿಕೆ ನೀಡಿದ್ದು, ಅಹ್ಮದ್​ ಶೆಹಝಾದ್​​ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದೆ. ಅಹ್ಮದ್​​ ನಿಷೇಧಿತ ವಸ್ತುವನ್ನು ಬಳಸಿದ್ದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶೀಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

2017ರ ವೆಸ್ಟ್​​ ಇಂಡೀಸ್​ ವಿರುದ್ಧದ ಟೆಸ್ಟ್​​​ ಸರಣಿಯ ಬಳಿಕ ಪಾಕ್​, ಅಹ್ಮದ್​ರನ್ನು ದೂರ ಇಟ್ಟಿದೆ. ಕಳೆದ ಅಕ್ಟೋಬರ್​​ನಿಂದ ಏಕದಿನ ಪಂದ್ಯಗಳನ್ನು ಆಡಿರಲಿಲ್ಲ. ಆದ್ರೆ, ಕಳೆದ ತಿಂಗಳು ಎರಡು ಪಂದ್ಯಗಳನ್ನು ಆಡಿದ್ದ ಶೆಹಝಾದ್​ ರನ್​ ಬರ ಅನುಭವಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...