alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನ ಕ್ರಿಕೆಟಿಗನಿಗೆ ಗಂಭೀರ ಗಾಯ

pak-grab

ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಣ ಎರಡನೇ ಟಿ-20 ಪಂದ್ಯದಲ್ಲಿ ಅವಘಡವೊಂದು ಸಂಭವಿಸಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗೆ ಡಿಕ್ಕಿಹೊಡೆದ ಪಾಕಿಸ್ತಾನದ ಅಹ್ಮದ್ ಶೆಹ್ಜಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಂಡೀಸ್ ಇನ್ನಿಂಗ್ಸ್ ನ ನಾಲ್ಕನೇ ಓವರ್ ನಲ್ಲಿ ನಡೆದ ಘಟನೆ ಇದು.

ಸೊಹೈಲ್ ತನ್ವೀರ್ ಬೌಲಿಂಗ್ ನಲ್ಲಿ ಮರ್ಲೊನ್ ಸ್ಯಾಮ್ಯುಯೆಲ್ಸ್ ಬ್ಯಾಟಿಂಗ್ ಮಾಡ್ತಾ ಇದ್ರು. ಸಿಂಗಲ್ಸ್ ತೆಗೆದುಕೊಳ್ಳುವ ಧಾವಂತದಲ್ಲಿ ಓಡಿ ಬಂದಿದ್ದಾರೆ. ಅವರನ್ನು ರನೌಟ್ ಮಾಡುವ ಆತುರದಲ್ಲಿ ಶೆಹ್ಜಾದ್ ವಿಕೆಟ್ ಮಧ್ಯಕ್ಕೆ ಬಂದುಬಿಟ್ಟಿದ್ರು. ಈ ವೇಳೆ ಇಬ್ಬರ ಮಧ್ಯೆ ಡಿಕ್ಕಿಯಾಗಿದೆ.

ಶೆಹ್ಜಾದ್ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಪ್ರಜ್ಞೆತಪ್ಪಿ ಬಿದ್ರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಶೆಹ್ಜಾದ್ ಗೆ ಇನ್ನೂ ಪ್ರಜ್ಞೆ ಮರಳಿಲ್ಲ ಎನ್ನಲಾಗ್ತಿದೆ. ವಿಪರ್ಯಾಸ ಅಂದ್ರೆ ಇದೇ ಪಂದ್ಯದಲ್ಲಿ ಇನ್ನೂ ಎರಡು ಬಾರಿ ಆಟಗಾರರ ಮಧ್ಯೆ ಇದೇ ರೀತಿ ಡಿಕ್ಕಿ ಸಂಭವಿಸಿದೆ. ಆದ್ರೆ ಅದೃಷ್ಟವಶಾತ್ ಆ ಸಂದರ್ಭದಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...