alex Certify
ಕನ್ನಡ ದುನಿಯಾ       Mobile App
       

Kannada Duniya

ಪೀಟರ್ಸನ್ ಗೂ ಎಮಿರೇಟ್ಸ್ ವಿಮಾನದಲ್ಲಾಯ್ತು ಕಹಿ ಅನುಭವ

ಟೀಂ ಇಂಡಿಯಾದ ಓಪನರ್ ಶಿಖರ್ ಧವನ್ ಎಮಿರೇಟ್ಸ್ ಏರ್ ಲೈನ್ಸ್  ವಿರುದ್ಧದ ತಮ್ಮ ಕೋಪವನ್ನು ಟ್ವಿಟ್ಟರ್ ನಲ್ಲಿ ಹೊರಹಾಕಿದ್ರು. ಧವನ್ ಪತ್ನಿ ಮತ್ತು ಮಗನಿಗೆ ದುಬೈನಿಂದ ದಕ್ಷಿಣ ಆಫ್ರಿಕಾಗೆ ತೆರಳಲು ಎಮಿರೇಟ್ಸ್ ಅವಕಾಶ ಮಾಡಿಕೊಟ್ಟಿಲ್ಲ ಅನ್ನೋದು ಧವನ್ ರನ್ನು ಕೆರಳಿಸಿತ್ತು.

ಇದೀಗ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಈಗ ಎಮಿರೇಟ್ಸ್ ನಲ್ಲಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ. ಪೀಟರ್ಸನ್ ಕೂಡ ಯುಕೆಯಿಂದ ದುಬೈ ಮಾರ್ಗವಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್ ಗೆ ಹೊರಟಿದ್ರು. ಎಮಿರೇಟ್ಸ್ ಸಿಬ್ಬಂದಿ ಅವರ ಲಗೇಜ್ ಅನ್ನೇ ಬಿಟ್ಟು ಬಂದಿದ್ರು.

ಇದು ಪೀಟರ್ಸನ್ ಅವರನ್ನು ಕೆರಳಿಸಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೀಟರ್ಸನ್ ಪೋಸ್ಟ್ ಮಾಡಿದ್ದಾರೆ. ಮೆಲ್ಬರ್ನ್ ಗೆ ತೆರಳಿದ ಬಳಿಕ ಕೆಲವೇ ಗಂಟೆಗಳಲ್ಲಿ ಅವರು ಟಿವಿ ಶೋನಲ್ಲಿ ಪಾಲ್ಗೊಳ್ಳಬೇಕಿತ್ತು. ಬಟ್ಟೆಗಳಿದ್ದ ಬ್ಯಾಗನ್ನೇ ವಿಮಾನ ಸಿಬ್ಬಂದಿ ಬಿಟ್ಟು ಬಂದಿದ್ರಿಂದ ಪೀಟರ್ಸನ್ ಪಜೀತಿ ಅನುಭವಿಸಿದ್ದಾರೆ. ಮೆಲ್ಬರ್ನ್ ಗೆ ಬಂದಿಳಿಯುತ್ತಿದ್ದಂತೆ ಪೀಟರ್ಸನ್ ಹೊಸ ಬಟ್ಟೆ ಖರೀದಿಸಿ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...