alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗಾಗಿ ಮುಂಬೈಗೆ ತೆರಳಿರುವ ಕೊಹ್ಲಿ ಮಿಸ್ ಮಾಡಿಕೊಳ್ತಿರುವುದೇನು…?

ಕಳೆದ ವರ್ಷ ಇಟಲಿಯಲ್ಲಿ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂತರ ಪಂದ್ಯಗಳ ಕಾರಣಕ್ಕಾಗಿ ಬ್ಯುಸಿಯಾಗಿದ್ದರು. ಈಗ ಶ್ರೀಲಂಕಾ ವಿರುದ್ದದ ಸರಣಿಯಿಂದ ಹಿಂದೆ ಸರಿದಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಕಾಲ ಕಳೆಯುತ್ತಿದ್ದಾರೆ.

ಮುಂಬೈನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಸ್ವಂತ ಬಂಗಲೆ ಹೊಂದಿದ್ದರೂ ಅದಿನ್ನೂ ಪೂರ್ಣವಾಗಿ ಸಿದ್ದವಾಗಿರದ ಕಾರಣ ಮಾಸಿಕ 15 ಲಕ್ಷ ರೂ. ಬಾಡಿಗೆ ಮನೆಯಲ್ಲಿ ವಿರುಷ್ಕಾ ದಂಪತಿ ಸದ್ಯಕ್ಕೆ ವಾಸ್ತವ್ಯ ಹೂಡಿದ್ದಾರೆ.

ದೆಹಲಿ ನಿವಾಸಿಯಾಗಿದ್ದ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರ ಸಲುವಾಗಿ ಮುಂಬೈಗೆ ಶಿಫ್ಟ್ ಆಗಿದ್ದು, ಈ ಸಂದರ್ಭದಲ್ಲಿ ತಾವು ಮಿಸ್ ಮಾಡಿಕೊಳ್ಳುತ್ತಿರುವುದು ಏನೆಂಬುದನ್ನು ಹೇಳಿಕೊಂಡಿದ್ದಾರೆ.

ಶ್ವಾನಗಳ ಕುರಿತು ಅತೀವ ಪ್ರೀತಿಯುಳ್ಳ ವಿರಾಟ್ ಕೊಹ್ಲಿ, ಮುಂಬೈಗೆ ಬಂದ ಬಳಿಕ ತಮ್ಮ ದೆಹಲಿ ನಿವಾಸದಲ್ಲಿರುವ ಪ್ರೀತಿಪಾತ್ರ ಶ್ವಾನಗಳನ್ನು ಬಹಳವೇ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅನುಷ್ಕಾ ಸಹ ಶ್ವಾನಗಳ ಮೇಲೆ ಪ್ರೀತಿ ಉಳ್ಳವರಾಗಿದ್ದು, ಶೀಘ್ರವೇ ಅದಕ್ಕೊಂದು ವ್ಯವಸ್ಥೆ ಮಾಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...