alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಗೆ ಶಾಕ್ ಕೊಟ್ಟ ಅಫ್ಘಾನ್ ಕ್ರಿಕೆಟ್ ಮಂಡಳಿ

aff

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಬೆಂಬಲವಿದೆ ಅನ್ನೋದು ಎಲ್ಲರೂ ತಿಳಿದಿರೋ ಸತ್ಯ, ಮೊನ್ನೆಯಷ್ಟೆ ಕಾಬೂಲ್ ನಲ್ಲಿರೋ ಭಾರತೀಯ ರಾಯಭಾರ ಕಚೇರಿ ಬಳಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದ ಉಗ್ರರು 80 ಜನರನ್ನು ಬಲಿ ಪಡೆದಿದ್ದರು.

ಈ ದಾಳಿಯ ಬಳಿಕ ಅಫ್ಘಾನಿಸ್ತಾನ, ಪಾಕ್ ಜೊತೆಗಿನ ಕ್ರಿಕೆಟ್ ಬಾಂಧವ್ಯವನ್ನೇ ಕಡಿದುಕೊಂಡಿದೆ. ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಸರಣಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ರದ್ದು ಮಾಡಿದೆ. ಮುಗ್ಧ ಜನರನ್ನು ಕೊಲ್ಲುವ ಮೂಲಕ ಅಫ್ಘಾನಿಸ್ತಾನದ ಶತ್ರುರಾಷ್ಟ್ರ, ತಾನು ಸ್ನೇಹಕ್ಕೂ ಲಾಯಕ್ಕಲ್ಲ ಅನ್ನೋದನ್ನು ಸಾಬೀತುಪಡಿಸಿದೆ ಅಂತಾ ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಜೊತೆಗಿನ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳು, ಸರಣಿಗಳು ಹಾಗೂ ಪಿಸಿಬಿ ಜೊತೆಗಿನ ಒಪ್ಪಂದಗಳನ್ನು ಅಫ್ಘಾನ್ ಕ್ರಿಕೆಟ್ ಬೋರ್ಡ್ ರದ್ದು ಮಾಡಿದೆ. ಕಾಬೂಲ್ ನಲ್ಲಿ ನಡೆದ ಭೀಕರ ದಾಳಿ ಹಿಂದೆ ಪಾಕಿಸ್ತಾನದ ಐಎಸ್ಐ ಬೆಂಬಲಿತ ಹಕ್ಕಾನಿ ನೆಟ್ವರ್ಕ್ ಕೈವಾಡವಿದೆ ಅನ್ನೋದು ದೃಢಪಟ್ಟ ಬಳಿಕ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...