alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಅಮ್ಮನಾಗ್ತಿದ್ದಾರೆ ಟೆನಿಸ್ ತಾರೆ

serena_2_1495283657_749x421

ಸದ್ಯ ಟೆನಿಸ್ ಅಂಗಳದಿಂದ ದೂರವಿರುವ ಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಅಮೆರಿಕಾ ತಾರೆ ಹಿಂದಿನ ತಿಂಗಳು ಈ ವಿಷ್ಯವನ್ನು ಮುಚ್ಚಿಡಲು ಯತ್ನಿಸಿದ್ದರು. ಆದ್ರೆ ಸ್ನಾಪ್ ಚಾಟ್ ನಲ್ಲಿ ತಮ್ಮ ಫೋಟೋ ಹಾಕಿದ್ದ ಸೆರೆನಾ ಪರೋಕ್ಷವಾಗಿ ತಾವು ಗರ್ಭಿಣಿ ಎನ್ನುವುದನ್ನು ಹೇಳಿದ್ದರು. ಇದಾದ ನಂತ್ರ ಅವರ ಅಧಿಕೃತ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದರು. ಈಗ ಸೆರೆನಾ ತಾವೇ ತಮ್ಮ ಅಭಿಮಾನಿಗಳಿಗೆ ಅಮ್ಮನಾಗುವ ಖುಷಿ ಹಂಚಿಕೊಂಡಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಸೆರೆನಾ ಫೋಟೋಗಳನ್ನು ಹಾಕಿದ್ದು, ತಮ್ಮ ಖುಷಿ ಹಂಚಿಕೊಂಡಿದ್ದಾರೆ. 35 ವರ್ಷದ ಸೆರೆನಾ 20 ವಾರಗಳ ಗರ್ಭಿಣಿ. 23 ಗ್ರಾಂಡ್ ಸ್ಲಾಮ್ ಗೆದ್ದಿರುವ ಸೆರೆನಾ, ಇನ್ಸ್ಟ್ರಾಗ್ರಾಮ್ ನಲ್ಲಿ ಒಂದಿಷ್ಟು ಫೋಟೋ ಹಾಕಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಬೇಬಿ ಬಂಪ್ ತೋರಿಸಿದ್ದಾರೆ ಸೆರೆನಾ.

ಹಿಂದಿನ ವರ್ಷ ಸೆರೆನಾ ರೆಡಿಟ್ ಸಂಸ್ಥೆಯ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ನ್ಯೂಯಾರ್ಕ್ ನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಸೆರೆನಾ, ಅಲೆಕ್ಸಿಸ್ ಜೊತೆ ಕಾಣಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...