alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದಲ್ಲೇ ‘ಚಿನ್ನ’ದ ಹುಡುಗಿಯ ವಿವಾಹ ನಿಶ್ಚಿತಾರ್ಥ

ಏಷ್ಯನ್ ಗೇಮ್ಸ್ ನ ಕುಸ್ತಿ ಅಖಾಡದಲ್ಲಿ ರಿಯಲ್ ದಂಗಲ್ ಹುಡುಗಿ ವಿನೇಶ್ ಪೋಗತ್ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ಘಟನೆ ನಿಮಗೆಲ್ಲಾ ಗೊತ್ತೇ ಇದೆ. ಈಗ ವಿನೇಶ್ ಪೋಗತ್ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್ ಆದ ವಿಚಾರ ಬೆಳಕಿಗೆ ಬಂದಿದೆ. ದಂಗಲ್ ಹುಡುಗಿ ಈಗ ಬಾಳ ಸಂಗಾತಿಯ ಜೊತೆಗೆ ಮಿಂಗಲ್ ಆಗುವ ಮೊದಲ ಪ್ರಕ್ರಿಯೆ ಮುಗಿಸಿದ್ದಾರೆ.

24ನೇ ವರ್ಷದ ಹುಟ್ಟುಹಬ್ಬವನ್ನು ಚಿನ್ನ ಗೆಲ್ಲುವ ಮೂಲಕ ಸೆಲೆಬ್ರೇಟ್ ಮಾಡ್ತಿರೋ ವಿನೇಶ್ ಪೋಗತ್ ಈಗ ಬಾಳ ಸಂಗಾತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಮುಂದಾಗಿದ್ದಾರೆ. ಗೋಲ್ಡರ್ನ್ ಗರ್ಲ್ ತಮ್ಮ ದೀರ್ಘ ಕಾಲದ ಗೆಳೆಯ ಮತ್ತು ಕುಸ್ತಿ ಪಟು ಸೋಮ್ ವೀರ್ ರಾಟಿಯವರೊಂದಿಗೆ ಏರ್ಪೋರ್ಟ್ನಲ್ಲೇ ಎಂಗೇಜ್ ಆಗಿಬಿಟ್ಟಿದ್ದಾರೆ.

ಹೌದು. ಜಕಾರ್ತಾದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಹಾಗೆ ವಿನೇಶ್ ಪೋಗತ್ ಮತ್ತು ಸೋಮ್ ವೀರ್ ನಿಶ್ಚಿತಾರ್ಥದ ಉಂಗುರ ಬದಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ವಿಮಾನ ನಿಲ್ದಾಣದಲ್ಲೇ ಕೇಕು ಕತ್ತರಿಸಿ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಸಮಯದಲ್ಲಿ ವಿನೇಶ್ ಪೋಗತ್ ಮತ್ತು ಸೋಮ್ ವೀರ್ ಕುಟುಂಬ ಮತ್ತು ಸ್ನೇಹಿತರ ಬಳಗ ಹಾಜರಿತ್ತು.

ಈ ಹಿಂದೆ ವಿನೇಶ್ ಪೋಗತ್ ಹೆಸರು ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಜೊತೆ ಥಳುಕು ಹಾಕಿಕೊಂಡಿತ್ತು. ಮಾಧ್ಯಮಗಳಲ್ಲಿ ಕೂಡ ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆದ್ರೆ ವಿನೇಶ್ ಪೋಗತ್ ಮತ್ತು ನೀರಜ್ ಚೋಪ್ರಾ ಇದನ್ನ ಅಲ್ಲಗಳೆದಿದ್ದರು. ಸರ್ಪ್ರೈಸ್ ಎಂಗೇಜ್ಮೆಂಟ್ ಪಾರ್ಟಿ ಆ ವಿವಾದವನ್ನು ಮರೆಸುವ ಪ್ರಯತ್ನ ಅಲ್ಲ ಅನ್ನೋದನ್ನು ವಿನೇಶ್ ಪೋಗತ್ ಹೇಳಿದ್ದಾರೆ.

ಸೋಮ್ ವೀರ್ ಮತ್ತು ನನ್ನ ನಡುವಿನ ಗೆಳೆತನದ ಬಗ್ಗೆ 7-8 ವರ್ಷಗಳಿಂದ ಇಡೀ ಭಾರತಕ್ಕೆ ಗೊತ್ತಿತ್ತು ಎಂದಿದ್ದಾರೆ ರಿಯಲ್ ದಂಗಲ್ ಹುಡುಗಿ. ಒಟ್ಟಿನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿ ಪಟು ಅನ್ನೋ ಹೆಗ್ಗಳಿಕೆಯ ಜೊತೆಗೆ ವಿನೇಶ್ ಪೋಗತ್ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋದು ಖುಷಿಯ ವಿಚಾರವೇ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...