alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಂಗಾರ’ದ ಸಾಧಕಿಗೆ ಕಾಂಕ್ರೀಟ್ ರಸ್ತೆಯ ಸ್ವಾಗತ

ಸ್ವಪ್ನ ಬರ್ಮನ್, ಏಷ್ಯನ್ ಗೇಮ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿ, ಬಂಗಾರದ ಸಾಧನೆ ಮಾಡಿದ ಕ್ರೀಡಾಪಟು. ಹಲ್ಲು ನೋವನ್ನು ಲೆಕ್ಕಿಸದೆ ಪದಕದ ಕನಸನ್ನು ಸಾಕಾರಗೊಳಿಸಿದ ಗಟ್ಟಿಗಿತ್ತಿ. ಸ್ವಪ್ನ ಇಂಡೋನೇಷ್ಯಾದಲ್ಲಿ ಬಂಗಾರ ಗೆಲ್ಲುತ್ತಿದ್ದಂತೆ, ಇತ್ತ ಪಶ್ಚಿಮ ಬಂಗಾಳದಲ್ಲಿ ಹರ್ಷದ ವಾತಾವರಣ.

ಬಂಗಾಳದ ಉತ್ತರ ಪ್ರಾಂತ್ಯದ ಜಲಪೈಗುರಿಯ ಕುವರಿ ಸ್ವಪ್ನ, ದೇಶ ಹೆಮ್ಮೆಪಡುವಂತ ಸಾಧನೆ ಮಾಡಿದ್ದಾರೆ. ಸಾಧಕಿಯ ಸಾಧನೆಯನ್ನು ಕೊಂಡಾಡಲು ಹಲವು ಗಣ್ಯರು ಜಲಪೈಗುರಿಗೆ ಬರುತ್ತಾರೆ ಎಂಬುದನ್ನು ಮನಗೊಂಡು, ಈಗ ಅಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ.

ಹೆಪ್ಟಾಥ್ಲಾನ್ ನಲ್ಲಿ ಬಂಗಾರ ಗೆದ್ದು, ಐತಿಹಾಸಿಕ ಸಾಧನೆ ಮಾಡಿದ ಸ್ವಪ್ನಾರಿಗೆ ಪ.ಬಂಗಾಳ ಸರ್ಕಾರ 10 ಲಕ್ಷ ರೂ. ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡೋದಾಗಿ ತಿಳಿಸಿದೆ. ಕೇಂದ್ರ ಸಚಿವ ಎಸ್. ಅಹ್ಲುವಾಲಿಯಾ 30 ಲಕ್ಷ ರೂ. ಘೋಷಣೆ ಮಾಡಿದ್ದಾರೆ.

ಸ್ವಪ್ನ ಇಂಡೋನೇಷ್ಯಾದಲ್ಲಿ ಬಂಗಾರದ ಸಾಧನೆ ಮಾಡ್ತಾ ಇದ್ದಂತೆ, ಇತ್ತ ಅವರ ತಾಯಿ ಸಾಧನೆಯ ಹಿಂದಿನ ಕಷ್ಟವನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದರು. ಸ್ವಪ್ನಾ ತಾಯಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...