alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಾಗಲಿದ್ದಾರೆ ಟೀಮ್ ಇಂಡಿಯಾದ ಮುಂದಿನ ಕೋಚ್?

ಭಾರಿ ನಿರೀಕ್ಷೆಯೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದ ಭಾರತ ಕ್ರಿಕೆಟ್ ತಂಡ, ಸರಣಿ ಸೋಲಿನೊಂದಿಗೆ ವಾಪಾಸಾಗುತ್ತಿರುವ ಬೆನ್ನಲ್ಲೇ, ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರ ಬದಲಾವಣೆ ಬಗ್ಗೆ ಮಾತುಗಳು ಕೇಳಿಬಂದಿದೆ. ಆದರೀಗ ಅವರ ಸ್ಥಾನವನ್ನು ಯಾರು ತುಂಬಬಹುದು ಎನ್ನುವ ಪ್ರಶ್ನೆಗಳು ಎದ್ದಿವೆ.

ಟೆಸ್ಟ್ ನಂ1 ರ್ಯಾಂಕ್ ನಲ್ಲಿರುವ ಭಾರತ, ಈ ಬಾರಿ ಇಂಗ್ಲೆಂಡ್ ಅನ್ನು ತವರು ನೆಲದಲ್ಲಿ ಮಣಿಸಬಹುದು ಎನ್ನುವ ಲೆಕ್ಕಚಾರ ಇತ್ತು. ಆದರೆ 4-1ರಿಂದ ಇಂಗ್ಲೆಂಡ್ ವಿರುದ್ಧ ಮಂಡಿಯೂರಿರುವುದಕ್ಕೆ ಕೊಹ್ಲಿ, ತಂಡದ ವಿಫಲತೆಯನ್ನು ಒಪ್ಪಿಕೊಂಡಿದ್ದಾರೆ.

ಆದರೆ ಶಾಸ್ತ್ರಿ ಮಾತ್ರ, ಹಿಂದಿನ ಭಾರತದ ತಂಡಗಳಿಗೆ ಹೋಲಿಸಿದರೆ ಈಗಿರುವ ತಂಡ ಉತ್ತಮ ಪ್ರದರ್ಶನ ನೀಡಿದೆ ಎನ್ನುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ.

ಶಾಸ್ತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುನೀಲ್ ಗವಾಸ್ಕರ್, ಕಳೆದ ಕೆಲ ವರ್ಷಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ 1980ರಲ್ಲಿಯೇ ಭಾರತ ತಂಡ ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಲ್ಲಿ ಗೆಲುವು ದಾಖಲಿಸಿದೆ. ಇನ್ನು ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 2005ರಲ್ಲಿ ವೆಸ್ಟ್ ಇಂಡೀಸ್, 2007ರಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಗೆಲುವು ಸಾಧಿಸಿದೆ ಎಂದಿದ್ದಾರೆ.

ಇಷ್ಟೆಲ್ಲ ಬೆಳವಣಿಗೆ ನಡುವೆ ಇದೀಗ ಶಾಸ್ತ್ರಿ ಅವರ ಬದಲಿಗೆ ಇನ್ನೊಬ್ಬರನ್ನು ಮುಖ್ಯ ತರಬೇತುದಾರರಾಗಿ ಮಾಡಬೇಕೆಂಬ ಮಾತುಗಳು ಬಿಸಿಸಿಐ ವಲಯದಲ್ಲಿ ಕೇಳಿ ಬರುತ್ತಿದ್ದು, ಪ್ರಮುಖವಾಗಿ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ವಿರೇಂದ್ರ ಸೆಹವಾಗ್ ಹಾಗೂ ರಾಹುಲ್ ದ್ರಾವಿಡ್ ರೇಸ್ ನಲ್ಲಿ ಇದ್ದಾರೆ. ಈಗಾಗಲೇ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಮುಂದಿನ ದಿನದಲ್ಲಿ ಭಾರತ ತಂಡದ ಕೋಚ್ ಆದರೂ ಅನುಮಾನವಿಲ್ಲ ಎನ್ನುವ ಮಾತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...