alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಕಾ ವಿರುದ್ಧ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರ ದಾಂಧಲೆ

ನಿದಾಹಸ್ ಟ್ರೋಫಿಯಲ್ಲಿ ನಿನ್ನೆ ನಡೆದ ಶ್ರೀಲಂಕಾ-ಬಾಂಗ್ಲಾದೇಶ ಟಿ-20 ಪಂದ್ಯದಲ್ಲಿ ನೋ ಬಾಲ್ ವಿವಾದ ಉಂಟಾಗಿತ್ತು. ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿದೆ. ಪಂದ್ಯದ ಬಳಿಕ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ನ ಕನ್ನಡಿಯನ್ನೇ ಒಡೆದು ಹಾಕಿದ್ದಾರಂತೆ.

ಗಾಜು ಒಡೆದವರು ಯಾರು ಅನ್ನೋದನ್ನು ಪತ್ತೆ ಮಾಡಲು ಆರ್. ಪ್ರೇಮದಾಸ ಮೈದಾನದ ಸಿಬ್ಬಂದಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಕೇಳಿದ್ದಾರೆ. ತನಿಖೆ ಬಳಿಕ ಮ್ಯಾಚ್ ರೆಫ್ರಿ ಕ್ರಿಸ್ ಬೋರ್ಡ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ಲಂಕಾ ವಿರುದ್ಧ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರು ಗಾಜು ಪೀಸ್ ಪೀಸ್ ಮಾಡಿದ್ದಾರಂತೆ. ಹಾಗಾಗಿ ಇದರಿಂದಾದ ನಷ್ಟವನ್ನು ಭರಿಸುವುದಾಗಿ ಈಗಾಗ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದ್ರೆ ಸಿಸಿ ಟಿವಿ ದೃಶ್ಯ ಪರಿಶೀಲನೆ ಬಳಿಕವಷ್ಟೇ ಮುಂದಿನ ಕ್ರಮ ಅಂತಾ ರೆಫ್ರಿ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...