alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಜಗತ್ತು ಕಂಡ ಅತಿ ಕಿರಿಯ ನಾಯಕನ್ಯಾರು ಗೊತ್ತಾ?

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮೇಲಿಂದ ಮೇಲೆ ದಾಖಲೆ ಸೃಷ್ಟಿಸುತ್ತಲೇ ಇದ್ದಾರೆ. 19ರ ಹರೆಯದ ರಶೀದ್ ಗೂಗ್ಲಿಗೆ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಗಳು ಸಹ ಕಂಗಾಲಾಗಿದ್ದಾರೆ. ಐಸಿಸಿ ಏಕದಿನ ಮತ್ತು ಟಿ20ಯಲ್ಲಿ ರಶೀದ್ ಖಾನ್ ನಂಬರ್ ವನ್ ಬೌಲರ್.

ಅಷ್ಟೇ ಅಲ್ಲ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ಸಕ್ಲೇನ್ ಮುಸ್ತಾಕ್ 21ನೇ ವರ್ಷದಲ್ಲಿ ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ದಾಖಲೆ ಮಾಡಿದ್ದರು. ಅವರನ್ನು ರಶೀದ್ ಈಗ ಹಿಂದಿಕ್ಕಿದ್ದಾರೆ.

ಅಷ್ಟೇ ಅಲ್ಲ ರಶೀದ್ ಖಾನ್, ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಕಿರಿಯ ನಾಯಕ. ನಾಯಕ ಅಸ್ಗರ್ ಗೆ ಅಪಂಡಿಸೈಟಿಸ್ ಶಸ್ತ್ರಚಿಕಿತ್ಸೆಯಾಗಿರೋದ್ರಿಂದ ಅವರು ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ 19 ವರ್ಷದ ರಶೀದ್ ಖಾನ್ ರನ್ನು ತಂಡದ ನಾಯಕನಾಗಿ ನೇಮಕ ಮಾಡಿದೆ.

ಈ ಹಿಂದೆ 2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ರಂಜನ್ ಸಾಲೆ ಜಗತ್ತಿನ ಅತ್ಯಂತ ಕಿರಿಯ ಕ್ಯಾಪ್ಟನ್ ಎನಿಸಿಕೊಂಡಿದ್ದರು. ತಂಡದ ನಾಯಕತ್ವ ವಹಿಸಿಕೊಂಡಾಗ ಅವರಿಗೆ 20 ವರ್ಷವಾಗಿತ್ತು. ಆದ್ರೀಗ ಆ ದಾಖಲೆ ರಶೀದ್ ಖಾನ್ ಪಾಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...