alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟ ಕಾರಣಕ್ಕೆ ದಾಖಲೆ ಪುಸ್ತಕ ಸೇರಿದ ಇಂಗ್ಲೆಂಡ್ ಕ್ರಿಕೆಟಿಗ

ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್ ಆದಿಲ್ ರಶೀದ್ ವಿಶಿಷ್ಟ ಕಾರಣಕ್ಕಾಗಿ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಆದಿಲ್ 1 ಓವರ್ ಬಾಲ್ ಮಾಡದೆ ದಾಖಲೆಯ ಪುಟ ಸೇರಿದ್ದಾರೆ.

ಪ್ರವಾಸಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಎರಡನೇ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಗಳ ಜಯ ದಾಖಲಿಸಿದೆ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೂ ಬಾಲಿಂಗ್ ಮಾಡದೆ ಬ್ಯಾಟಿಂಗ್ ಇಳಿಯದೆ ರಶೀದ್ ದಾಖಲೆ ಬರೆದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದು ಕ್ಯಾಚ್ ಹಾಗೂ ರನ್ ಔಟ್ ಮಾಡಿ ರಶೀದ್ ಮಿಂಚಿದ್ದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪಡೆಯ ವೇಗಿಗಳು ಕರಾರುವಾಕ್ ದಾಳಿ ನಡೆಸಿ ಕೊಹ್ಲಿ ಪಡೆಗೆ ಕಂಟಕವಾಗಿದ್ದರು. ಸ್ವಿಂಗ್ ಬೌಲರ್ ಗಳಾದ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್ ಶಿಸ್ತುಬದ್ಧ ದಾಳಿ ನಡೆಸಿದರು. ಪರಿಣಾಮ ಟೀಮ್ ಇಂಡಿಯಾ 2 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿತು. ರಶೀದ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಾಗಿನಿಂದಲೂ ಚರ್ಚೆಯ ವಿಷಯವಾಗಿದ್ದರು.

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ್ರೂ, ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡದ ವಿಶ್ವದ 14ನೇ ಆಟಗಾರ ಎಂಬ ಹೆಗ್ಗಳಿಕೆ ರಶೀದ್ ಅವರದ್ದಾಯಿತು. ಅಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್ ತಂಡದ, ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ ರಶೀದ್ ರಿಗೆ ಎರಡನೇ ಟೆಸ್ಟ್ ನಲ್ಲೂ ಆಡುವ ಅವಕಾಶ ಲಭಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...