alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ ಸಲ್ಮಾನ್ ಸಹೋದರ…!

ಐಪಿಎಲ್ ಬೆಟ್ಟಿಂಗ್ ನಲ್ಲಿ ಈಗ ಸಲ್ಮಾನ್ ಖಾನ್ ಸಹೋದರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. ಅಂತರಾಷ್ಟ್ರೀಯ ಬೆಟ್ಟಿಂಗ್ ಪ್ರಕರಣದಲ್ಲಿ ಅರ್ಬಾಜ್ ಖಾನ್ ಗೆ ಠಾಣೆ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ. ಬೆಟ್ಟಿಂಗ್ ನಲ್ಲಿ ಸಿಕ್ಕಿಬಿದ್ದ ಸೋನು ಜಾಲಾನ್ ವಿಚಾರಣೆ ವೇಳೆ ಅರ್ಬಾಜ್ ಖಾನ್ ಹೆಸರು ಹೊರಬಿದ್ದಿದೆ.

ವರದಿ ಪ್ರಕಾರ ಶುಕ್ರವಾರ 2 ಗಂಟೆ ನಂತ್ರ ಅರ್ಬಾಜ್ ಖಾನ್ ಗೆ ಸಮನ್ಸ್ ಜಾರಿ ಮಾಡಲಾಗಿದೆ. ಶೀಘ್ರವೇ ಅರ್ಬಾಜ್ ಖಾನ್ ಪೊಲೀಸ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಇತ್ತೀಚೆಗಷ್ಟೇ ಬೆಟ್ಟಿಂಗ್ ರಾಕೆಟ್ ಬಣ್ಣ ಬಯಲು ಮಾಡಿದ್ದರು. 42 ವರ್ಷದ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋನು 50 ವರ್ಷದ ಅರ್ಬಾಜ್ ಹೆಸರು ಹೇಳಿದ್ದಾನೆ ಎನ್ನಲಾಗಿದೆ.

ಬಾಂದ್ರಾದಲ್ಲಿರುವ ಅರ್ಬಾಜ್ ಮನೆಗೆ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ. ತನಿಖೆ ವೇಳೆ ಪೊಲೀಸ್ ಮುಂದೆ ಅರ್ಬಾಜ್ ಹಾಜರಾಗುವ ಅವಶ್ಯಕತೆಯಿದೆ. ಸೋನು ಭಾರತವೊಂದೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...