alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿತ್ತಾ ಪಾಕ್ ತಂಡ..?

pakistan_getty-newಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಲು ಎರಡು ದಿನಗಳು ಬಾಕಿಯಿರುವಂತೆಯೇ ಪಾಕ್ ತಂಡದ ಮಾಜಿ ಆಟಗಾರನೊಬ್ಬ ಹೊಸ ಬಾಂಬ್ ಸಿಡಿಸಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ಅಮೀರ್ ಸೋಹೆಲ್, ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಫೈನಲ್ ತಲುಪಿರುವುದಕ್ಕೆ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಸಂತಸ ಪಡಬೇಕಿಲ್ಲ. ಪಂದ್ಯ ಗೆಲ್ಲಲು ತೆರೆ ಹಿಂದೆ ಏನು ನಡೆದಿದೆ ಎಂಬ ಸಂಗತಿ ನಮಗೆಲ್ಲ ಗೊತ್ತಿದೆ ಎಂದಿದ್ದಾರೆ. ಈ ಹೇಳಿಕೆ ಮೂಲಕ ಇಂಗ್ಲೆಂಡ್ ವಿರುದ್ದದ ಪಾಕಿಸ್ತಾನದ ಗೆಲುವು ಮೊದಲೇ ಫಿಕ್ಸ್ ಆಗಿತ್ತೇ ಎಂಬ ಅನುಮಾನಕ್ಕೂ ಕಾರಣವಾಗಿದ್ದಾರೆ.

ತಮ್ಮೆಲ್ಲರ ಹರಕೆ, ಹಾರೈಕೆ ಕಾರಣಕ್ಕಾಗಿ ಪಾಕ್ ತಂಡ ಫೈನಲ್ ತಲುಪಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ ಕೆಲ ಕಾರಣಗಳಿಗಾಗಿ ಪಾಕಿಸ್ತಾನ ತಂಡ ಫೈನಲ್ ತಲುಪುವಂತಾಗಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ಅಮೀರ್ ಸೋಹೆಲ್. ಇನ್ನಾದರೂ ಪಾಕ್ ಆಟಗಾರರು ಉತ್ತಮ ಆಟವಾಡುವತ್ತ ಗಮನ ನೀಡಬೇಕಿದೆ ಎಂದು ಸಲಹೆ ನೀಡಿದ್ದಾರೆ. ಅಮೀರ್ ಸೋಹೆಲ್ ಅವರ ಹೇಳಿಕೆ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದ್ದು, ಇದರ ಬಳಿಕ ಅಮೀರ್ ಸೋಹೆಲ್ ಉಲ್ಟಾ ಹೊಡೆದಿದ್ದಾರೆ. ಆದರೆ ಈ ವಿಡಿಯೋ ಈಗ ವೈರಲ್ ಆಗಿದ್ದು, ಪಾಕ್ ಆಟಗಾರರ ನೈತಿಕ ಸ್ಥೈರ್ಯ ಕುಂದುವಂತಾಗಿದೆ. ಇದು ಭಾರತ ವಿರುದ್ದದ ಫೈನಲ್ ಪಂದ್ಯದ ವೇಳೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...