alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಾಸೆ ಮೂಡಿಸಿದ ಅಭಿನವ್ ಬಿಂದ್ರಾ

abhinav-bindr

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತಕ್ಕೆ, ಶೂಟಿಂಗ್ ನಲ್ಲಿ ಚಿನ್ನ ತರಲಿದ್ದಾರೆ ಎಂದೇ ಹೇಳಲಾಗಿದ್ದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ ನಿರಾಸೆ ಮೂಡಿಸಿದ್ದಾರೆ. ಶೂಟಿಂಗ್ ನ ಫೈನಲ್ ಪಂದ್ಯದಲ್ಲಿ ಬಿಂದ್ರಾ 4 ನೇ ಸ್ಥಾನ ಗಳಿಸಿದ್ದಾರೆ.

ಅರ್ಹತಾ ಸುತ್ತಿನ ಪಂದ್ಯದಲ್ಲಿ 7 ನೇ ಸ್ಥಾನ ಗಳಿಸಿ ಫೈನಲ್ ತಲುಪಿದ್ದ ಅಭಿನವ್ ಬಿಂದ್ರಾ, ಫೈನಲ್ ಪಂದ್ಯದ ಆರಂಭಿಕ ಸುತ್ತುಗಳಲ್ಲಿ ಉತ್ತಮವಾಗಿ ಆಟವಾಡಿದರಾದರೂ ನಂತರದ ರೌಂಡ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದ ಬಿಂದ್ರಾ ಈ ಬಾರಿ ರಿಯೋ ಒಲಿಂಪಿಕ್ಸ್ ನಲ್ಲಿಯೂ ಚಿನ್ನ ಗಳಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್ ನಲ್ಲಿ 4 ನೇ ಸ್ಥಾನ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಇಟಲಿಯ ನೊಕಾಲೋ ಕಾಂಪ್ರಿಯಾನ ಚಿನ್ನ, ಉಕ್ರೇನ್ ಶೂಟರ್ ಶೆಹರಿಯಾರ್ ಕುರೇಶ್ ಬೆಳ್ಳಿ ಹಾಗೂ ರಷ್ಯಾ ಶೂಟರ್ ವ್ಲಾದಿಮರ್ ಮಸ್ಲೇನಿಕೇವ್ ಕಂಚಿನ ಪದಕ ಗೆದ್ದರೆ, ಭಾರತದ ಅಭಿನವ್ ಬಿಂದ್ರಾ 4 ನೇ ಸ್ಥಾನ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...