alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಟಿ -20 ಸೋತ ದಕ್ಷಿಣ ಆಫ್ರಿಕಾಕ್ಕೆ ಬಿಗ್ ಶಾಕ್…!

ಜೋಹಾನ್ಸ್ ಬರ್ಗ್: ಭಾರತದ ವಿರುದ್ಧದ ಟಿ -20 ಸರಣಿಯ ಮೊದಲ ಪಂದ್ಯವನ್ನು 28 ರನ್ ಅಂತರದಿಂದ ಸೋತ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ದಕ್ಷಿಣ ಆಫ್ರಿಕಾ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಎಬಿ ಡಿ’ವಿಲಿಯರ್ಸ್ ಭಾರತದ ಎದುರಿನ ಟಿ -20 ಸರಣಿಯಿಂದ ದೂರ ಉಳಿಯಲಿದ್ದಾರೆ. ಸೆಂಚೂರಿಯನ್ ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಗೊಂಡಿದ್ದ ಡಿ’ವಿಲಿಯರ್ಸ್ ಟಿ -20 ಸರಣಿಯಿಂದ ಹೊರಗುಳಿದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವೈದ್ಯ ಮೊಹಮ್ಮದ್ ಮೂಸಾಜೀ ಈ ಕುರಿತು ಮಾಹಿತಿ ನೀಡಿದ್ದು, ಎಡ ಮೊಣಕಾಲಿಗೆ ಗಾಯವಾಗಿರುವುದರಿಂದ ಎಬಿ ಡಿ’ವಿಲಿಯರ್ಸ್ ವಿಶ್ರಾಂತಿ ಪಡೆಯಬೇಕಿದೆ. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...