alex Certify
ಕನ್ನಡ ದುನಿಯಾ       Mobile App
       

Kannada Duniya

ದಿಢೀರ್ ನಿವೃತ್ತಿಗೆ ಕೊನೆಗೂ ಕಾರಣ ಹೇಳಿದ ಎಬಿಡಿ

ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮನ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯನ್ಸ್ 2018 ರ ಮೇನಲ್ಲಿ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 114 ಟೆಸ್ಟ್, 228 ಏಕದಿನ ಪಂದ್ಯ, 78 ಟಿ-20 ಪಂದ್ಯಗಳನ್ನ ಆಡಿರುವ ಎಬಿಡಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ ಅನ್ನೋ ವಿಚಾರ ಇಂದಿಗೂ ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳೋದಕ್ಕೆ ಕಷ್ಟವಾಗ್ತಿದೆ.

ಎಬಿಡಿ ಹೋದಲ್ಲಿ ಬಂದಲ್ಲೆಲ್ಲಾ ಮತ್ತೆ ಕ್ರಿಕೆಟ್ ಗೆ ವಾಪಸ್ಸಾಗುವಂತೆ ಅಭಿಮಾನಿಗಳು ಮನವಿ ಮಾಡ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳುತ್ತಲೇ ಇಷ್ಟು ದಿನ ನಿವೃತ್ತಿಗೆ ಕಾರಣ ಹೇಳದೆ ಸುಮ್ಮನಿದ್ದ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮನ್, ಕೊನೆಗೂ ತಮ್ಮ ನಿವೃತ್ತಿಯ ಕಾರಣ ಬಹಿರಂಗಪಡಿಸಿದ್ದಾರೆ.

ನನ್ನ ಆಟವನ್ನು ನಾನು ಆಡಿದ್ದೇನೆ. ನಿಜ ಹೇಳಬೇಕಂದ್ರೆ ನಾನು ದಣಿದಿದ್ದೇನೆ. ನನಗೆ ಗೊತ್ತು ಸಭ್ಯರ ಆಟದಿಂದ ನಿವೃತ್ತರಾಗೋದು ಕಷ್ಟದ ನಿರ್ಧಾರ. ಆದ್ರೆ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ ಅಭೂತಪೂರ್ವ ಗೆಲುವಿನೊಂದಿಗೆ ವಿದಾಯ ಹೇಳೋದು ಆಟಕ್ಕೆ ಸೂಕ್ತ ಸಮಯ ಅಂತ ನಿರ್ಧರಿಸಿದೆ. ಯಾವ ಫಾರ್ಮೆಟ್ ನ ಆಟದಿಂದ ಅನ್ನೋದಕ್ಕಿಂತಲೂ ಎಲ್ಲಾ ಬಗೆಯ ಆಟದಿಂದ ನಿವೃತ್ತನಾಗೋಕೆ ಇದು ಸುಸಂದರ್ಭ ಅಂತ ನನಗೆ ಅನ್ನಿಸಿತು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಎಬಿಡಿ ಆಟದಿಂದ ನಿವೃತ್ತರಾಗುವ ಸಂದರ್ಭದಲ್ಲಿ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕನೇ ಅತ್ಯಧಿಕ ರನ್ ಸ್ಕೋರರ್ ಆಗಿದ್ದರು. ಏಕದಿನ ಪಂದ್ಯಗಳಲ್ಲಿ ವಿಶ್ವದ ನಂಬರ್ 2 ಬ್ಯಾಟ್ ಮನ್ ಆಗಿದ್ದರು. ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ ನಂತರದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಆಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...